ಶಾವಿಗೆ ಉಪ್ಪಿಟ್ಟು ರೆಸಿಪಿ ಮಾಡುವ ವಿಧಾನ : ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಶಾವಿಗೆ ಉಪ್ಪಿಟ್ಟು ರೆಸಿಪಿ ಮಾಡುವ ವಿಧಾನ ಅನ್ನು ತಿಳಿಯೋಣ.

ಶಾವಿಗೆ ರೆಸಿಪಿ ಮಾಡಲು ಬೇಕಾಗುವ ಸಾಮಾಗ್ರಿಗಳು
- ಕಾಲು ಕೆಜಿ ಅಷ್ಟು ಶಾವಿಗೆ Vermicelli 4k 232g
- ಸಾಸಿವೆ Musturd seed ಒಂದು ಚಿಕ್ಕ ಚಮಚ ದಷ್ಟು
- ಎರಡರಿಂದ ಮೂರು ದೊಡ್ಡ ಚಮಚ ದಷ್ಟುನೆಲಗಡಲೆ 21g
- ಒಂದರಿಂದ ಎರಡು ದೊಡ್ಡ ಚಮಚ ದಷ್ಟು ಕಡಲೆ ಬೇಳೆ Chana dal 13g
- ಒಂದರಿಂದ ಒಂದೂವರೆ ದೊಡ್ಡ ಚಮಚದಷ್ಟು ಉರ್ದು ಬೇಳೆ 11g
- ಒಂದು ಚಿಕ್ಕ ಚಮಚ ದಷ್ಟು ಜೀರಿಗೆ Cumin seed 3g
- ಎರಡರಿಂದ ಮೂರು ಬ್ಯಾಡಗಿ ಮೆಣಸಿನಕಾಯಿ Byadagi Red Chilies 6g
- ಕಾಯಿ ಮೆಣಸು Green Chilies ಎಂಟು 25g
- ಎರಡು ದೊಡ್ಡ ಚಮಚ ದಷ್ಟು ಬೇವಿನ ಸೊಪ್ಪು Curry Leaves 7g
- ಒಂದು ಈರುಳ್ಳಿ ಹಚ್ಚಿದ 126g
- ಕೊತ್ತಂಬರಿ ಸೊಪ್ಪು Cilantro 12g
- ಒಂದು ಲಿಂಬೆ ರಸ 5g
- ಎರಡೂ ದೊಡ್ಡ ಚಮಚ ದಷ್ಟು ಸಕ್ಕರೆ 23g
- ಉಪ್ಪು ರುಚಿಗೆ ತಕ್ಕಷ್ಟು
- Sunflower oil ಎಣ್ಣೆ
ಶಾವಿಗೆ ರೆಸಿಪಿ ಮಾಡುವ ವಿಧಾನ ತಿಳಿಯೋಣ


- ಶಾವಿಗೆ ಮಾಡಲು ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಿ. ಬಾಣಲೆ ಸ್ವಲ್ಪ ಬಿಸಿ ಆದಾಗ Sunflower ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಶಾವಿಗೆ ಹಾಕಿ ಸೌಟ್ ಅಲ್ಲಿ ಮಗುಚಿ ಇಲ್ಲಿ ಸ್ವಲ್ಪ ಬೆಂಕಿಯಲ್ಲಿ ಶಾವಿಗೆ ಬಣ್ಣ ಬದಲಾದಾಗ ತೆಗೆದು ಬೇರೊಂದು ತಟ್ಟೆಯಲ್ಲಿ ಹಾಕಿ ಇಡಿ.
- ಈಗ ಅದೇ ಬಾಣಲೆಯಲ್ಲಿ ಉಪ್ಪಿಟ್ಟು ಮಾಡುವ ಅದಕ್ಕೆ ಇನ್ನೊಮ್ಮೆ ಸ್ಟೌವ್ ಮೇಲೆ ಇಟ್ಟು ಆನ್ ಮಾಡಿ. ಎಣ್ಣೆಯನ್ನೂ ಹಾಕಿ, ಎಣ್ಣೆ ಕಾಯುವಾಗ ಸಾಸಿವೆಯನ್ನು ಹಾಕಬೇಕು.ಸಾಸಿವೆ ಹೂಡಿಯುವಾಗ ಕಡಲೆ ಬೇಳೆಯನ್ನು ಹಾಕಿ, ಹಾಗೇ ಉರ್ದು ಬೇಳೆ, ನಂತರ ನೆಲಗಡಲೆ ಹಾಕಿ. ಹಾಗೇ ಜೀರಿಗೆ ಹಾಕಿ, ಬ್ಯಾಡಗಿ ಮೆಣಸಿನಕಾಯಿ ತುಂಡು ಮಾಡಿ ಸೇರಿಸಿ, ನಂತರ ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಈಗ ಸ್ವಲ ಉಪ್ಪನ್ನು ಬೆರೆಸಿದರೆ ಈರುಳ್ಳಿ ಬೇಗ ಕಾಯುತ್ತದೆ.ಈಗಾ ಸ್ವಲ್ಪ ಮಗುಚಿ ಹಾಗೇ ಈಗ ಬೇವಿನ ಸೊಪ್ಪು ಹಾಕಿ. ನಂತರ ಉದ್ದವಾಗಿ ಹಚ್ಚಿದ ಕಾಯಿ ಮೆಣಸು ಹಾಕಿ. ನಂತರ ಚಿಕ್ಕದಾಗಿ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ ನಂತರ ಸಕ್ಕರೆ ಸೇರಿಸಿ.ಹಾಗೇ ಸಪ್ಪೆ ನೀರನ್ನೂ ಹಾಕಿ ಅಳತೆಗೆ ಒಂದು ಲೋಟ ಶಾವಿಗೆಗೆ ಒಂದುವರೆ ಲೋಟ ದಷ್ಟು ನೀರು ಹಾಕಿ, ಓಮ್ಮೆ ಮಿಕ್ಸ್ ಮಾಡಿಕೊಳ್ಳಿ. ನಂತರ ಲಿಂಬೆ ರಸ ಹಾಕಿ.ಈಗ ನೀರು ಕುದಿಯುವಾಗ ತಟ್ಟೆಯಲ್ಲಿ ಇಟ್ಟಿರುವ ಶಾವಿಗೆ ಹಾಕಿ. ಈಗ ನೀರು ಸಂಪೂರ್ಣವಾಗಿ ಆರುವವರೆಗೆ ಹೀಗೆ ಮಾಗುಚುತ್ತ ಇರಿ.ಈಗ ನೀರು ಸಂಪೂರ್ಣವಾಗಿ ಆರಿದೆ, ಅಲ್ಲವೇ ಸ್ಟೌವ್ ಆಫ್ ಮಾಡಿ.
- ಈಗ ಶಾವಿಗೆ ಉಪ್ಪಿಟ್ಟು ಸವಿಯಲು ಸಿದ್ಧವಾಗಿದೆ.ಇದನ್ನು ನೀವೂ ಮನೆಯಲ್ಲಿ ತಯಾರು ಮಾಡಿ. ಬೆಳಗ್ಗಿನ ಉಪಹಾರಕ್ಕೆ ಸೇವಿಸಿದರೆ ಚೆನ್ನಾಗಿರುತ್ತದೆ. ಇದನ್ನೂ ನೀವೂ ಮನೆಯಲ್ಲಿ ತಯಾರು ಮಾಡಿ. ಇದರಲ್ಲಿ ನೂರು ಗ್ರಾಂ ಗೆ ಸುಮಾರು 173 ಕಿಲೋ ದಷ್ಟು ಕ್ಯಾಲರಿ ಇದೆ.