Beans palya in kannada ಬೀನ್ಸ್ ಪಲ್ಯ ಮಾಡುವ ವಿಧಾನ

Beans palya in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಬೀನ್ಸ್ ಪಲ್ಯ ಮಾಡುವ ವಿಧಾನ ಅನ್ನು ಕನ್ನಡ ದಲ್ಲಿ ತಿಳಿದು ಕೊಳ್ಳೋಣ.

Beans palya in kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಬೀನ್ಸ್ Beans ಕಾಲು ಕೆಜಿ ಯಷ್ಟು
  • ಒಂದೂ ದೊಡ್ಡ ಚಮಚದಷ್ಟು ಕರಿ ಬೇವಿನ ಸೊಪ್ಪು Curry Leaves
  • ನಾಲ್ಕೂ ಎಸಳು ಬೆಳ್ಳುಳ್ಳಿ Garlic
  • ಒಂದು ಈರುಳ್ಳಿ ಚಿಕ್ಕದಾಗಿ ಹಚ್ಚಿದ Onion
  • ಎರಡರಿಂದ ಮೂರು ಕಾಯಿ ಮೆಣಸು Green Chilies ಉದ್ದವಾಗಿ ಹಚ್ಚಿದ
  • ಒಂದು ಚಿಕ್ಕ ಚಮಚ ದಷ್ಟು ಸಾಸಿವೆ Musturd Seed
  • ಒಂದು ದೊಡ್ಡ ಚಮಚ ದಷ್ಟು ಉರ್ದು ಬೇಳೆ Urad dal
  • ಅರ್ದ ಚಿಕ್ಕ ಚಮಚ ದಷ್ಟು ಅರಶಿನ ಪುಡಿ Turmeric powder
  • ಅರ್ದ ಚಿಕ್ಕ ಚಮಚ ದಷ್ಟು ಜೀರಿಗೆ ಪುಡಿ Cumin Powder
  • ಒಂದೂ ಚಿಕ್ಕ ಚಮಚ ದಷ್ಟು ಕೆಂಪು ಮೆಣಸಿನ ಪುಡಿ Red Chilies Powder
  • ಅರ್ದ ಗಡಿ ತೆಂಗಿನ ಕಾಯಿ ತುರಿದ Coconut
  • ಉಪ್ಪು ರುಚಿಗೆ ತಕ್ಕಷ್ಟು
  • ತೆಂಗಿನ ಎಣ್ಣೆ Coconut oil

ಅಮೆಜಾನ್ Grocery Store Visit ಮಾಡಿ

ಬೀನ್ಸ್ ಪಲ್ಯ ಮಾಡುವ ವಿಧಾನ ತಿಳಿಯೋಣ

  • ಮೊದಲು ಒಂದು ಬಾಣಲೆಯನ್ನು ತೆಗೆದುಕೊಳ್ಳಿ.ಅದಕ್ಕೆ ಸ್ವಲ್ಪತೆಂಗಿನ ಎಣ್ಣೆಯನ್ನೂ ಹಾಕಿ. ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಿ.ಸಾಸಿವೆ ಪಟ ಪಟ ಎನ್ನುವಾಗ ಕರಿ ಬೇವಿನ ಸೊಪ್ಪು ಹಾಕಿ.ಹಾಗೆಯೇ ಉರ್ದು ಬೇಳೆ ಹಾಕಿ, ಸೌಟ್ ನಿಂದಾ ಮಗುಚಿ. ಅದೇ ರೀತಿ ಬೆಳ್ಳುಳ್ಳಿ ಹಾಗೂ ಸಣ್ಣಗಿನ ಗಾತ್ರದಲ್ಲಿ ಹಚ್ಚಿದ ಈರುಳ್ಳಿಯನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ, ಹಾಗೇಯೆ ಉದ್ದವಾಗಿ ಹಚ್ಚಿದ ಕಾಯಿ ಮೆಣಸು ಹಾಕಿ. ಅದೇ ರೀತಿ ಈರುಳ್ಳಿ ಬಾಡೂತ್ತ ಬರುವಾಗ ಬೀನ್ಸ್ ಅನ್ನುಹಾಕಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಅರಶಿನ ಪುಡಿ, ಹಾಗೇ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ನಂತರ ಬೀನ್ಸ್ ಬೇಯಲು ಬೇಕಾದ ಹಾಗೆ ನೀರನ್ನೂ ಸೇರಿಸಿ, ಮುಚ್ಚಳ ಹಾಕಿ ಹದ ಬೆಂಕಿಯಲ್ಲಿ ಐದು ನಿಮಿಷ ಕಾಲ ಬೇಯಿಸಿ.
  • ಸುಮಾರು ಐದು ನಿಮಿಷಗಳ ನಂತರ ಮುಚ್ಚಳ ತೆಗೆದು ನೋಡಿದರೆ ಬೀನ್ಸ್ ಚೆನ್ನಾಗಿ ಬೆಂಡಿರುತದೆ. ನಂತರ ಅದಕ್ಕೆ ತೆಂಗಿನ ತುರಿ ಹಾಕಿ, ಹಾಗೇಯೆ ಪುಡಿ ಮಸಾಲೆಯನ್ನು ಹಾಕುವ ಅದಕ್ಕೆ ಮೊದಲು ಕೆಂಪು ಮೆಣಸಿನ ಪುಡಿ ಹಾಕಿ,ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಗೆ ಬೀನ್ಸ್ ಮಸಾಲೆಯನ್ನು ಚೆನ್ನಾಗಿ ಎಳೆದುಕೊಂಡಿದೆ ಅಲ್ಲವೇ ಸ್ಟೌವ್ ಆರಿಸಿ.
  • ಈಗ ಬೀನ್ಸ್ ಪಲ್ಯ ರೆಸಿಪಿ ತಯಾರಾಗಿದೆ. ಬೀನ್ಸ್ ನಲ್ಲಿ ಪ್ರೊಟೀನ್ ಅಂಶ ಹೆಚ್ಚು ಇರುತ್ತದೆ. ಈ ಒಂದು ಸುಲಭದ ಅಡುಗೆ ಮನೆಯಲ್ಲಿ ಮಾಡಿ ಹಾಗೇ ಹೇಗಿದೆ ಎಂದು ಕಮೆಂಟ್ ನಲ್ಲಿ ತಿಳಿಸಿ.

Simple chocolate cake recipe in kannada ಚಾಕಲೇಟ್ ರೆಸಿಪಿ

Summary
recipe image
Review Date
Reviewed Item
Beans palya in kannada ಬೀನ್ಸ್ ಪಲ್ಯ ಮಾಡುವ ವಿಧಾನ
Author Rating
51star1star1star1star1star
Recipe Name
Beans palya in kannada ಬೀನ್ಸ್ ಪಲ್ಯ ಮಾಡುವ ವಿಧಾನ

Leave a Comment

error: Content is protected !!