Bottle gourd halwa: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಸೋರೆಕಾಯಿ ಹಲ್ವಾ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Bottle gourd halwa ಮಾಡಲು ಬೇಕಾಗುವ ಸಾಮಗ್ರಿಗಳು
- Bottle gourd ಸೋರೆಕಾಯಿ 734g
- ಸಕ್ಕರೆ Sugar 229g
- ಎರಡು ಚಿಕ್ಕ ಚಮಚ ದಷ್ಟು ಗೇರು ಬೀಜ Cashewnuts 26g
- ಎರಡೂ ಚಿಕ್ಕ ಚಮಚ ದಷ್ಟು ಓಣದ್ರಾಕ್ಷಿ Raisins 22g
- ಒಂದು ಚಿಕ್ಕ ಚಮಚ ದಷ್ಟು ಏಲಕ್ಕಿ ಪುಡಿ Green Cardamom Powder 1g
- ತುಪ್ಪ Ghee 71g
- ಹಳದಿ ಫುಡ್ ಕಲರ್ yellow food colour
ಅಮೆಜಾನ್ Grocery Store Visit ಮಾಡಿ
ಸೋರೆಕಾಯಿ ಹಲ್ವಾ lauki ka halwa ಮಾಡುವ ವಿಧಾನ ತಿಳಿಯೋಣ


- ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಆನ್ ಮಾಡಿ.ಬಾಣಲೆ ಬಿಸಿ ಆದಾಗ ತುಪ್ಪವನ್ನು ಸುರಿಯಿರಿ. ತುಪ್ಪ ಕರಗುತ್ತಾ ಬರುವಾಗ ಗೇರುಬೀಜ ಹಾಕಿ ಸ್ವಲ್ಪ ಹೊತ್ತು ಚೆನ್ನಾಗಿ ಮಗುಚಿ. ಗೇರು ಬೀಜ ದ ಬಣ್ಣ ಹದ ಕಂದು ಬಣ್ಣಕ್ಕೆ ತಿರುಗಿದಾಗ ಓಣ ದ್ರಾಕ್ಷಿ ಅನ್ನೂ ಹಾಕಿ ಸ್ವಲ್ಪ ಹೊತ್ತು ಚೆನ್ನಾಗಿ ಮಗುಚಿ.ಈಗ ಒಣದ್ರಾಕ್ಷಿ ಉಬ್ಬುತ್ತಾ ಬರುತ್ತದೆ. ಆಗ ಚಿಕ್ಕದಾಗಿ ಹಚ್ಚಿ ಇಟ್ಟುಕೊಂಡ ಸೋರೆಕಾಯಿ ತುರಿ ಹಾಕಿ. ಈಗ ಹದ ಬೆಂಕಿಯಲ್ಲಿ ಸ್ವಲ್ಪ ಹೊತ್ತು ಮಗುಚಿ.ನಂತರ ಹಳದಿ ಫುಡ್ ಕಲರ್ ಸೇರಿಸಿ,ಮಗುಚಿ. ಆಮೇಲೆ ಇದ್ದ ಬೆಂಕಿ ಗಿಂತ ಕಡಿಮೆ ಇಟ್ಟು ಮುಚ್ಚಳ ಹಾಕಿ ಐದರಿಂದ ಹತ್ತು ನಿಮಿಷ ಕಾಲ ಬೇಯಿಸಿ.
- ಹತ್ತು ನಿಮಿಷದ ನಂತರ ಮುಚ್ಚಳ ತೆಗೆದು ಮಗುಚಿ. ನಂತರ ಸಕ್ಕರೆ ಸೇರಿಸಿ, ಇದೂ ನಿಮ್ಮ ಬಾಯಿ ರುಚಿಗೆ ತಕ್ಕಷ್ಟು ಸೇರಿಸಿ, ಅದೇ ರೀತಿ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇನ್ನೂ ಮುಂದೆ ಸೋರೆಕಾಯಿ ನೀರಿನ ಅಂಶ ಹಾಗೂ ಸಕ್ಕರೆ ಕರಗುತ್ತಾ ನಿರಾಗುವ ಪ್ರಕ್ರಿಯೆ , ಈಗ ಅದಕ್ಕೆ ಸೌಟ್ ನಿಂದಾ ಮಗುಚಿ. ಒಂದೆರಡು ನಿಮಿಷಗಳ ನಂತರ ನೀರಿನ ಅಂಶ ಹಾರಿ ಹೋಗಿದೆ.ಹಾಗೇ ಹಲ್ವಾ ಪಲ ಪಲ ವಾಗೀ ಹೊಳೀತಾ ಇದೆ. ಸ್ಟೌವ್ ಆಫ್ ಮಾಡಿ.
- ಈಗ ಸೋರೆಕಾಯಿ ಹಲ್ವಾ ಸವಿಯಲು ಸಿದ್ಧವಾಗಿದೆ.ಈ ಸಿಹಿಯಾದ ಹಲ್ವಾ ವಾನ್ನೂ. ನೀವೂ ಮನೆಯಲ್ಲಿ ತಯಾರು ಮಾಡಿ ಹಾಗೇ ಹೇಗಿದೆ ಎಂದು ಕಮೆಂಟ್ ಬಾಕ್ಸ್ ಅಲ್ಲಿ ತಿಳಿಸಿ.ಇದರಲ್ಲಿ ನೂರು ಗ್ರಾಂ ಗೆ ಸುಮಾರು 250.7ಕಿಲೋ ದಷ್ಟು ಕ್ಯಾಲರಿ ಇದೆ.
ಇದನ್ನೂ ಓದಿ 👇👇
Bottle gourd payasam mangalore style ಸೋರೆಕಾಯಿ ಪಾಯಸ