Bottle gourd payasam mangalore style ಸೋರೆಕಾಯಿ ಪಾಯಸ

Bottle gourd payasam mangalore style: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಸೋರೆಕಾಯಿ ಪಾಯಸ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಸೋರೆಕಾಯಿ ಪಾಯಸ

Bottle gourd payasam mangalore style ಮಾಡಲು ಬೇಕಾಗುವ ಸಾಮಗ್ರಿಗಳು

  • ಒಂದು ಕೆಜಿ ಅಷ್ಟು ಸೋರೆಕಾಯಿ Bottle Gourd 1063g
  • ಎರಡು ತೆಂಗಿನಕಾಯಿ ತುರಿದ 264g
  • ಬಾಂಬೆ ರವೆ 43g
  • Jaggery ಬೆಲ್ಲ 312g
  • ಒಂದು ದೊಡ್ಡ ಚಮಚ ದಷ್ಟು ಬಾದಾಮಿ Almonds 15g
  • ಎರಡೂ ಚಿಕ್ಕ ಚಮಚ ದಷ್ಟು ಒಣದ್ರಾಕ್ಷಿ Raisins 23g
  • ಉಪ್ಪು ರುಚಿಗೆ ತಕ್ಕಷ್ಟು Salt
  • ತುಪ್ಪ Ghee 59g

Amazon Grocery Store Visit

ಸೋರೆಕಾಯಿ ಪಾಯಸ ಮಾಡುವುದೂ ಹೇಗೆ?

  • ಈಗಾ ಒಂದು ಸೋರೆಕಾಯಿ ತೆಗೆದುಕೊಳ್ಳಿ ಅದನ್ನು ನಾಲ್ಕು ತುಂಡುಗಳಾಗಿ ಮಾಡಿಕೊಳ್ಳಿ. ತುಂಡು ಮಾಡಿ ಇಟ್ಟ ಸೋರೆಕಾಯಿ ಅನ್ನು ತೆಂಗಿನ ತುರೀಯ ರೀತಿಯಲ್ಲಿ ಮಾಡಿಕೊಳ್ಳಿ. ಕೆಳಗೆ ತೋರಿಸಿದ ಚಿತ್ರವನ್ನು ಗಮನಿಸಿ.
ಸೊರೆ ಕಾಯಿ ಹಚ್ಚಿ
  • ನಂತರ ತೆಂಗಿನ ಹಾಲನ್ನು ತಯಾರಿಸುವ ಅದಕ್ಕೆ ಒಂದು ಬ್ಲಂಡರ್ ಜಾರ್ ತಗೊಂಡು ಅದಕ್ಕೆ ತೆಂಗಿನ ಕಾಯಿ ತುರಿಯನ್ನು ಹಾಕಿ. ಬೇಕಾದಷ್ಟು ನೀರನ್ನೂ ಸೇರಿಸಿ ಸಣ್ಣವಾಗಿ ರುಬ್ಬಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಅಲ್ಲಿ ಇರುವ ತೆಂಗಿನ ಹಾಲನ್ನು ಒಂದು ಪಾತ್ರೆಗೆ ಕೈ ಇಂದ ಹಿಂಡಿ ಸೋಸಿ. ಕೆಳಗೆ ತೋರಿಸಿದ ಚಿತ್ರವನ್ನು ಗಮನಿಸಿ.ಇದರಲ್ಲಿ ದಪ್ಪ ಹಾಗೂ ತೆಳುವಾದ ಹಾಲು ಮಾಡಿಕೊಳ್ಳಿ. ದಪ್ಪ ಹಾಲಿಗೆ ಸ್ವಲ್ಪ ನೀರನ್ನೂ ಸೇರಿಸಿ ಈಗ ತೆಳುವಾದ ಹಾಲು ತಯಾರಿ ಆಗಿದೆ. ಇಲ್ಲಿ ದಪ್ಪ ಹಾಗೂ ತೆಳುವಾದ ಹಾಲು ಬೇರೆ ಬೇರೆ ಪಾತ್ರೆಯಲ್ಲಿ ತೆಗೆದು ಇಡಿ.
ಹಾಲನ್ನು ಹಿಂಡಿ
  • ನಂತರ ಒಂದು ಬೋಗೋನಿಯ ರೀತಿಯ ಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟು ತುಪ್ಪವನ್ನು ಕರಗಿಸಿ, ತುಪ್ಪ ಕರಗಿದ ನಂತರ ಬಾದಾಮಿ ಹಾಗೇ ಒಣದ್ರಾಕ್ಷಿ ಅನ್ನು ಹಾಕಿ ಸ್ವಲ್ಪ ಸೌಟ್ ನಿಂದಾ ಮಗುಚಿ. ನಂತರ ಬಾದಾಮಿ ಹಾಗು ಒಣ ದ್ರಾಕ್ಷಿ ಅನ್ನೂ ತೆಗೆದು ಒಂದು ಬೇರೆ ಪಾತ್ರೆಯಲ್ಲಿ ಹಾಕಿ ಇಡಿ.ನಂತರ ಬೋಗೋಣಿ ಪಾತ್ರೆಗೆ ಸೋರೆಕಾಯಿ ಹಚ್ಚಿ ಇಟ್ಟದನ್ನ ಹಾಕಿ. ಅದೇ ರೀತಿ ಸ್ವಲ್ಪ ಉಪ್ಪನ್ನು ಬೆರೆಸಿ. ಇಲ್ಲಿ ನೀರಿನ ಬದಲು ಸ್ವಲ್ಪ ತೆಳುವಾದ ತೆಂಗಿನ ಕಾಯಿ ಹಾಲನು ಅನ್ನು ಹಾಕಿ. ನಂತರ ಮುಚ್ಚಳ ಹಾಕಿ ಬೇಯಿಸಿ. ಒಂದೆರಡು ನಿಮಿಷಗಳ ನಂತರ ಮುಚ್ಚಳ ತೆಗೆದು ಬೆಲ್ಲವನ್ನು ಹಾಕಿ.ನಂತರ ತೆಂಗಿನ ಕಾಯಿ ದಪ್ಪ ಹಾಲನ್ನು ಹಾಕಿ. ಅದೇ ರೀತಿ ಪಾಯಸವನ್ನು ದಪ್ಪ ಮಾಡುವ ಸಲುವಾಗಿ ಬಾಂಬೆ ರವೆಯನ್ನೂ ಸೇರಿಸಿ. ಸ್ವಲ್ಪ ಬೇಯಿಸಿ,ಮುಂದೆ ನಾವು ಕಾಯಿಸಿ ಇಟ್ಟ ಒಣದ್ರಾಕ್ಷಿ ಹಾಗೂ ಬಾದಾಮಿಯನ್ನು ಹಾಕಿ. ನಂತರ ಬೆಲ್ಲ ಕರಗಿದ ನಂತರ ಗುಳ್ಳೆಯ ರೀತಿಯಲ್ಲಿ ಬೆಯುವಗ ಸ್ಟೌವ್ ಆಫ್ ಮಾಡಿ, ಬಿಸಿ ಆರಲು ಬಿಡಿ.
  • ಈಗ ಸೋರೆಕಾಯಿ ಪಾಯಸ ಸವಿಯಲು ಸಿದ್ಧವಾಗಿದೆ. ಇದನ್ನೂ ನೀವೂ ಮನೆಯಲ್ಲಿ ಮಾಡಿ, ಇದೂ ದೇಹಕ್ಕೆ ತಂಪನ್ನು ನೀಡುತ್ತದೆ. ಇದರಲ್ಲಿ ನೂರು ಗ್ರಾಂ ಗೆ ಸುಮಾರು 135ಕಿಲೋ ದಷ್ಟು ಕ್ಯಾಲರಿ ಇದೆ.

Jackfruit chutney recipe in kannada ಹಲಸಿನ ಕಾಯಿ ಚಟ್ನಿ

Summary
recipe image
Review Date
Reviewed Item
Bottle gourd payasam mangalore style ಸೋರೆಕಾಯಿ ಪಾಯಸ
Author Rating
51star1star1star1star1star
Recipe Name
Bottle gourd payasam mangalore style ಸೋರೆಕಾಯಿ ಪಾಯಸ

Leave a Comment

error: Content is protected !!