Chicken Ghee Roast in Kannada ಚಿಕನ್ ಘೀ ರೋಸ್ಟ್ ರೆಸಿಪಿ

Chicken Ghee Roast in Kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಚಿಕನ್ ಘೀ ರೋಸ್ಟ್ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಚಿಕನ್ ಘೀ ರೋಸ್ಟ್ ರೆಸಿಪಿ

Chicken Ghee Roast in Kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಚಿಕನ್ ಒಂದೂ ಕೆಜಿಯಷ್ಟು -1223g
  • ಅರ್ದ ಅತವ ಒಂದೂ ನಿಂಬೆ ರಸ lemon juice-8g
  • Yoghurt ಮೊಸರು ಒಂದೂ ದೊಡ್ಡ ಚಮಚದಷ್ಟು -44g
  • ಒಂದು ಚಿಕ್ಕ ಚಮಚ ದಷ್ಟು turmeric powder ಅರಶಿನ ಪುಡಿ -3g
  • ಒಂದೂ ಚಿಕ್ಕ ಚಮಚ ದಷ್ಟು Red chillies Powder ಕೆಂಪು ಮೆಣಸಿನ ಪುಡಿ-4g
  • ಕಾಲು ಚಮಚ ದಷ್ಟು ಮೆಂತೆ Fenugreek seeds-2g
  • ಒಂದೂವರೆ ಚಮಚ ದಷ್ಟು ಕರಿ ಮೆಣಸು Black pepper Corns -5g
  • ಮೂರು ಚಮಚ ದಷ್ಟು ಜೀರಿಗೆ Cumin seed-9g
  • ಒಂಬತ್ತು ಚಿಕ್ಕ ಚಮಚ ದಷ್ಟು ಕೊತ್ತಂಬರಿ Coriander Seeds-15g
  • ಸುಮಾರು ಇಪ್ಪತ್ತೈದು ಬ್ಯಾಡಗಿ ಮೆಣಸಿನಕಾಯಿ -46g
  • ಬೆಲ್ಲ ಒಂದೂ ದೊಡ್ಡ ಚಮಚದಷ್ಟು Jaggery 34g
  • ಒಂದು ಚಿಕ್ಕ ಚಮಚ ದಷ್ಟು ಹುಣಸೆ ಹುಳಿ Tamarind -8g
  • ಒಂದು ದೊಡ್ಡ ಚಮಚದಷ್ಟು ಕರಿ ಬೇವಿನ ಸೊಪ್ಪು Curry Leaves-5g
  • ಇಪ್ಪತ್ತು ಗ್ರಾಂ ಕೊತ್ತಂಬರಿ ಸೊಪ್ಪು
  • ಒಂದೂ ದೊಡ್ಡ ಚಮಚದಷ್ಟು ಅರೆದಿರುವ ಶುಂಠಿ ಬೆಳ್ಳುಳ್ಳಿ ಪೇಸ್ಟ್ -23g
  • ಎರಡೂ ಬೆಳ್ಳುಳ್ಳಿ-36g
  • ರುಚಿಗೆ ತಕ್ಕಷ್ಟು ಉಪ್ಪು
  • ತುಪ್ಪ Ghee -77g

Amazon Grocery Store Visit

ಚಿಕನ್ ಘೀ ರೋಸ್ಟ್ ರೆಸಿಪಿ ಮಾಡುವ ವಿಧಾನ

  • ಒಂದೂ ಬೋಗೊನಿಯ ತರಹದ ಪಾತ್ರೆಯನ್ನು ತೆಗೆದುಕೊಳ್ಳಿ ಅದಕ್ಕೆ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿನ ಪುಡಿ, ಕೆಂಪೂ ಮೆಣಸಿನ ಪುಡಿ, ಮೊಸರು, ಲಿಂಬೆರಸ, ಚಿಕನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಬೇರೆ ಮಸಾಲೆ ತಯಾರು ಆಗುವವರೆಗೆ ಇದೂ ಹಾಗೇ ಇರಲಿ.
  • ಈಗ ಸ್ಟೌವ್ ಆನ್ ಮಾಡಿ ಒಂದೂ ಬಾಣಲೆಯನ್ನು ಬಿಸಿ ಆಗಲು ಬಿಡಿ, ನಂತರ ಅದರಲ್ಲಿ ಬೆಳ್ಳುಳ್ಳಿ ಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಹಾಗೇ ಮೆಂತೆ, ಕರಿಮೆಣಸು, ಜೀರಿಗೆ, ಕೊತ್ತಂಬರಿ, ನಂತರ ಕಾಯಿಸಿ ಇಟ್ಟ ಬ್ಯಾಡಗಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಸ್ವಲ್ಪ ಪರಿಮಳ ಬಂದಾಗ ಸ್ಟವ್ ಆಫ್ ಮಾಡಿ.
  • ನಂತರ ಒಂದು ಮಿಕ್ಸ್ ಜಾರ್ ತಗೊಂಡು ಅದಕ್ಕೆ ಬಾಣಲೆಯಲ್ಲಿ ಇರುವ ಮಸಾಲೆಯನ್ನು ಹಾಕಿ ಪುಡಿ ಮಾಡಿ. ನಂತರ ಅದಕ್ಕೆ ಹುಣಸೆ ಹುಳಿ ರಸ, ಬೆಲ್ಲ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಪೆಸ್ಟ್ ಮಾಡಿ ಇಟ್ಟುಕೊಳ್ಳಿ.
  • ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ತುಪ್ಪ ಬಿಸಿ ಮಾಡಿಕೊಳ್ಳಿ, ಅದರಲ್ಲಿ ನಾವು ಮಸಾಲೆ ಹಾಕಿ ಇಟ್ಟ ಚಿಕನ್ ಅನ್ನು ಬೇಯಿಸಿ, ಚಿಕನ್ ಚೆನ್ನಾಗಿ ರೋಸ್ಟ್ ಆದ ನಂತರ, ಅದರ ಬಣ್ಣ ಬದಲಾಗುತ್ತದೆ. ನಂತರ ಚಿಕನ್ ಅನ್ನು ಬೇರೊಂದು ಪಾತ್ರೆಯಲ್ಲಿ ತೆಗೆದು ಇಡಿ.
  • ನಂತರ ಅದೇ ಬಾಣಲೆಯಲ್ಲಿ ಸ್ವಲ್ಪ ಜಾಸ್ತಿ ತುಪ್ಪವನ್ನು ತೆಗೆದುಕೊಳ್ಳಿ, ಹಾಗೇ ಮಿಕ್ಸ್ ಜಾರ್ ಅಲ್ಲಿ ಇರುವ ಮಸಾಲೆ ಪೆಸ್ಟ್ ಅನ್ನು ಹಾಕಿ ಮಿಕ್ಸ್ ಮಾಡಿ. ಮಸಾಲೆ ಗುಳ್ಳೆಯಾಗಿ ಕುದಿಯುತದೆ. ಆಗ ಬೇಯಿಸಿ ಇಟ್ಟ ಚಿಕನ್ ಅನ್ನು ಹಾಕಿ, ಈಗ ಚಿಕನ್ ಅನ್ನು ಮಸಾಲೆಯಲ್ಲಿ ಚೆನ್ನಾಗಿ ಕೋಟ್ ಮಾಡಿ ಬೇಯಲು ಬಿಡಿ.
  • ಈಗ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿಕೊಳ್ಳಿ, ಕರಿಬೇವಿನ ಸೊಪ್ಪು ಹಾಕಿ, ಮಿಕ್ಸ್ ಮಾಡಿ ಇಟ್ಟುಕೊಳ್ಳಿ.
  • ಈಗಾ ಚಿಕನ್ ಇರುವ ಇನ್ನೊಂದು ಬಾಣಲೆಯಲ್ಲಿ ಕೋಳಿ ಬೇಯುತ್ತ ಬರುವಾಗ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೇ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ನಂತರ ಇನ್ನೊಂದು ಬಾಣಲೆಯಲ್ಲಿ ಇರುವ ಕರಿಬೇವಿನ ಸೊಪ್ಪು ಹಾಕಿ, ಮಿಕ್ಸ್ ಮಾಡಿಕೊಳ್ಳಿ, ನಂತರ ನೀರು ಆರುವವರೆಗೆ ಮಿಕ್ಸ್ ಮಾಡಿಕೊಳ್ಳಿ.
  • ಸೂಚನೆ: ಚಿಕನ್ ಘೀ ರೋಸ್ಟ್ ಮಾಡುವಾಗ ನಾನ್ ಸ್ಟಿಕ್ ಪಾತ್ರೆಯನ್ನು ಉಪಯೋಗ ಮಾಡಿದರೆ ಒಳ್ಳೆಯದು.
  • ಈಗ Chicken Ghee Roast ಸವಿಯಲು ಸಿದ್ಧವಾಗಿದೆ. ಇದನ್ನೂ ನೀರು ದೋಸೆಯ ಜೊತೆಗೆ ಸವಿದರೆ ಬಹಳ ಚೆನ್ನಾಗಿರುತ್ತದೆ. ಇದರಲ್ಲಿ ಸುಮಾರು ನೂರು ಗ್ರಾಂ ಚಿಕನ್ ಘೀ ರೋಸ್ಟ್ ಅಲ್ಲಿ 178 ಗ್ರಾಂ ಅಷ್ಟು ಕ್ಯಾಲೋರಿ ಇದೆ.

Chicken Green Masala in Kannada ಚಿಕನ್ ಗ್ರೀನ್ ಮಸಾಲ

ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

Continue Reading ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

Continue Reading ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

Continue Reading ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Continue Reading ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Summary
recipe image
Review Date
Reviewed Item
Chicken Ghee Roast in Kannada ಚಿಕನ್ ಘೀ ರೋಸ್ಟ್ ರೆಸಿಪಿ
Author Rating
51star1star1star1star1star
Recipe Name
Chicken Ghee Roast in Kannada ಚಿಕನ್ ಘೀ ರೋಸ್ಟ್ ರೆಸಿಪಿ

Leave a Comment

x
error: Content is protected !!