Chicken Green Masala in Kannada ಚಿಕನ್ ಗ್ರೀನ್ ಮಸಾಲ

Chicken Green Masala in Kannada: ಈ ಒಂದೂ ಆರ್ಟಿಕಲ್ ನಲ್ಲಿ ನಾವು ಇಂದು ಚಿಕನ್ ಗ್ರೀನ್ ಮಸಾಲ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಚಿಕನ್ ಗ್ರೀನ್ ಮಸಾಲ

Chicken Green Masala in Kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಒಂದೂ ಕಾಲು ಕೆಜಿಯಷ್ಟು ಚಿಕನ್ ಚಿಕನ್ Chicken -1271g
  • Cilantro ಕೊತ್ತಂಬರಿ ಸೊಪ್ಪು 148g
  • Mint leaves ಅರ್ದ ಕಟ್ಟು ಪುದೀನಾ 34g
  • ಒಂದು ದೊಡ್ಡ ಚಮಚದಷ್ಟು ಕರಿ ಬೇವಿನ ಸೊಪ್ಪು Curry Leaves 5g
  • Green Chillies ಹಸಿರು ಮೆಣಸಿನಕಾಯಿ-59g
  • ಐದರಿಂದ ಆರು ಈರುಳ್ಳಿ ಹಚ್ಚಿದ Onion-605g
  • ಎರಡೂ ದೊಡ್ಡ ಚಮಚದಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್ Ginger Garlic Paste -40g
  • ಒಂದು ಚಮಚದಷ್ಟು ಅರಶಿನ ಪುಡಿ termaric powder -5g
  • ಎರಡೂ ಚಿಕ್ಕ ಚಮಚ ದಷ್ಟು ಜೀರಿಗೆ ಪುಡಿ Cumin Powder
  • ಎಂಟು ಚಿಕ್ಕ ಚಮಚ ದಷ್ಟು ಕೊತ್ತಂಬರಿ ಪುಡಿ Coriander powder-19g
  • ಒಂದು ಚಿಕ್ಕ ಚಮಚದಷ್ಟು ಕರಿಮೆಣಸು ಪುಡಿ Black pepper powder 3g
  • ಒಂದು ಚಿಕ್ಕ ಚಮಚ ದಷ್ಟು ಗರಂ ಮಸಾಲ ಪುಡಿ-4g
  • Lemon juice ಲಿಂಬೆ ರಸ -15g
  • ಒಂದು ದೊಡ್ಡ ಚಮಚದಷ್ಟು ಗೇರು ಬೀಜ Cashewnuts- 29g
  • ಫ್ರೆಶ್ ಕ್ರೀಮ್ Fresh Cream -64g
  • ಉಪ್ಪು ರುಚಿಗೆ ತಕ್ಕಷ್ಟು
  • 60 to 70ml Sunflower Oil-64g

Amazon Grocery Store

ಚಿಕನ್ ಗ್ರೀನ್ ಮಸಾಲ ಮಾಡುವ ವಿಧಾನ

  • ಒಂದೂ ಪಾತ್ರೆಯನ್ನು ತೆಗೆದುಕೊಳ್ಳಿ ಅದಕ್ಕೆ ಉಪ್ಪು, ಲಿಂಬೆ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿನ ಪುಡಿ, ಕರಿಮೆಣಸು ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಹಾಗೇ ಚಿಕನ್ ಅನ್ನೂ ಸೇರಿಸಿ ಇನ್ನೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
  • ನಂತರ ಒಂದು ಹಸಿರು ಮಸಾಲೆ ತಯಾರು ಮಾಡುವ ಅದಕ್ಕಾಗಿ ಒಂದು ಮಿಕ್ಸ್ ಜಾರ್ ತಗೊಂಡು, ಅದಕ್ಕೆ ಬೇವಿನ ಸೊಪ್ಪು, ಗೇರುಬೀಜ, ಕಾಯಿ ಮೆಣಸು, ಪುದೀನ, ಕೊತ್ತಂಬರಿ ಸೊಪ್ಪು, ನೀರು ಹಾಕಿ ದಪ್ಪ ಪೇಸ್ಟ್ ಮಾಡಿಕೊಳ್ಳಿ.
  • ಈಗ ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಅದಕ್ಕೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಹಾಗೇ ಬಿಸಿ ಆದ ಎಣ್ಣೆಗೆ ಈರುಳ್ಳಿಯನ್ನು ಹಾಕಿ, ಹಾಗೇ ಸ್ವಲ್ಪ ಉಪ್ಪನ್ನು ಬೆರೆಸಿ, ಈರುಳ್ಳಿ ಕಂದು ಬಣ್ಣಕ್ಕೆ ಬರುವ ವರೆಗೆ ಬೇಯಿಸಿ, ನಂತರ ಮಸಾಲೆಯಲ್ಲಿ ಮಿಕ್ಸ್ ಮಾಡಿ ಇಟ್ಟ ಚಿಕನ್ ಅನ್ನು ಹಾಕಿ ಹಾಗೇ ಸೌಟ್ ನಿಂದಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಐದು ನಿಮಿಷಗಳ ನಂತರ ಬೆಂಕಿಯನ್ನು ಸ್ವಲ್ಪ ಕಡಿಮೆ ಇಟ್ಟು ಮಿಕ್ಸ್ ಯಲ್ಲಿ ಇರುವ ಹಸಿರು ಪೇಸ್ಟ್ ಅನ್ನು ಸೇರಿಸಿ, ಹಾಗೇ ಅದೇ ಜಾರ್ ಅಲ್ಲಿ ನೀರನ್ನು ಹಾಕಿ, ಏಕೆಂದರೆ ಮಸಾಲೆ ವೆಸ್ಟ್ ಆಗಬಾರದು ಅಲ್ಲವೇ? ಹಾಗೇ ಪದಾರ್ಥ ಕುದಿಯುತ್ತಿರುವಗ ಮುಚ್ಚಲದಿಂದಾ ಮುಚ್ಚಿ, ನಂತರ ಚಿಕನ್ 95%ಅಷ್ಟು ಬೆಂದ ನಂತರ ಫ್ರೆಶ್ ಕ್ರೀಮ್ ಅನ್ನು ಸೇರಿಸಿ, ಹಾಗೇ ಫ್ರೆಶ್ ಕ್ರೀಮ್ ಹಾಕಿದ ನಂತರ ಹೆಚ್ಚು ಬೇಯಿಸಲು ಹೋಗಬೇಡಿ, ಎರಡೂ ನಿಮಿಷ ಸಾಕು.
  • ಈಗ ಚಿಕನ್ ಗ್ರೀನ್ ಮಸಾಲ ಸವಿಯಲು ಸಿದ್ಧವಾಗಿದೆ. ಇದನ್ನೂ Ghee Rice ಜೊತೆಗೆ ಸವಿದರೆ ಬಹಳ ಚೆನ್ನಾಗಿರುತ್ತದೆ. ಇದರಲ್ಲಿ 100g ಚಿಕನ್ ಅಲ್ಲಿ ಸುಮಾರು 120 ಕ್ಯಾಲೋರಿ ಇರುತದೆ.

Chinese Egg Noodles in Kannada ಚೈನೀಸ್ ಎಗ್ ನೂಡಲ್ಸ್

Leave a Comment

error: Content is protected !!