Coconut Rice recipe in Kannada ಕೊಕೊನಟ್ ರೆಸಿಪಿ ಕನ್ನಡ

Coconut Rice recipe in Kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಕೊಕೊನಟ್ ರೆಸಿಪಿ ಕನ್ನಡದಲ್ಲಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಕೊಕೊನಟ್ ರೆಸಿಪಿ ಕನ್ನಡ

Coconut Rice recipe in Kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಮುಕ್ಕಾಲು ಕೆಜಿಯಷ್ಟು ಬಾಸ್ಮತಿ ಅಕ್ಕಿ Basmati Raice
  • ಉಪ್ಪು ರುಚಿಗೆ ತಕ್ಕಷ್ಟು
  • ತೆಂಗಿನಕಾಯಿ ತುರಿದ
  • ತೆಂಗಿನ ಎಣ್ಣೆ Coconut oil
  • ಸಾಸಿವೆ Musterd Seed
  • ಕಡ್ಲೆ ಬೇಳೆ
  • ನೆಲಗಡಲೆ
  • ಉರ್ದು ಬೇಳೆ
  • ಬ್ಯಾಡಗಿ ಮೆಣಸಿನಕಾಯಿ Byadagi Chilies
  • ಜೀರಿಗೆ Cumin seeds
  • ಕರಿ ಬೇವಿನ ಸೊಪ್ಪು Curry Leaves
  • ಕಾಯಿ ಮೆಣಸು Green Chilies
  • ಗೇರು ಬೀಜ Cashewnuts
  • ಕೊತ್ತಂಬರಿ ಸೊಪ್ಪು Coriander

Amazon Grocery Store Visit

ಕೊಕೊನಟ್ ರೆಸಿಪಿ ಕನ್ನಡ ಮಾಡುವ ವಿಧಾನ

  • ಮುಕ್ಕಾಲು ಕೆಜಿ ಯಷ್ಟು ಒಳ್ಳೆಯ ಕ್ವಾಲಿಟಿ ಬಾಸ್ಮತಿ ಅಕ್ಕಿಯನ್ನು ಅರ್ದ ಗಂಟೆ ನೀರಿನಲ್ಲಿ ನೆನೆ ಹಾಕಿ. ಒಂದು ಗಡಿ ಅಂದರೆ ಅರ್ದ ತೆಂಗಿನ ಕಾಯಿ ತುರಿದು ಹಾಲನ್ನು ತೆಗೆದು ಇಡಿ.
  • ನಂತರ ಅನ್ನವನ್ನು ಬೇಯಿಸಲು ಒಂದು ಪಾತ್ರೆಯನ್ನು ತೆಗೆದುಕೊಳ್ಳಿ, ನಂತರ ನೆನೆ ಹಾಕಿರುವ ಬಾಸ್ಮತಿ ಅಕ್ಕಿಯ ನೀರನ್ನೂ ತೆಗೆದು ಪಾತ್ರೆಗೆ ಹಾಕಿ. ನಾಲ್ಕೂವರೆ ಚಿಕ್ಕ ಚಮಚ ದಷ್ಟು ಉಪ್ಪು ಬೆರೆಸಿ. ನಿಮ್ಮ ಅಳತೆಗೆ ಎರಡುವರೆ ಲೋಟದಸ್ಟು ಬಾಸ್ಮತಿ ಅಕ್ಕಿಗೆ ನಾಲ್ಕೂವರೆ ಲೋಟದಷ್ಟು ತೆಂಗಿನ ಹಾಲನ್ನು ಹಾಕಿ. ನಂತರ ಸ್ಟೌವ್ ಆನ್ ಮಾಡಿ. ಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟು ಮುಚ್ಚಳ ಹಾಕಿ ಬೇಯಲು ಬಿಡಿ.
  • ನಂತರ ಒಗ್ಗರಣೆಯನ್ನು ತಯಾರು ಮಾಡುವ ಅದಕ್ಕಾಗಿ ಒಂದು ಬಾಣಲೆಯನ್ನು ಓಲೆಯ ಮೇಲೆ ತೆಗೆದುಕೊಳ್ಳಿ. ಬಾಣಲೆ ಬಿಸಿ ಆದಾಗ ಸುಮಾರು 60ml ಅಷ್ಟು ತೆಂಗಿನ ಎಣ್ಣೆಯನ್ನು ಹಾಕಿ. ಎಣ್ಣೆ ಕಾಯುತ್ತಾ ಬರುವಾಗ ಒಂದೂವರೆ ಚಿಕ್ಕ ಚಮಚ ದಷ್ಟು ಸಾಸಿವೆಯನ್ನು ಹಾಕಿ. ಸಾಸಿವೆ ಪಟ ಪಟನೆ ಹುಡಿಯುವಾಗ ಎರಡು ಚಮಚದಷ್ಟು ಕಡ್ಲೆ ಬೇಳೆ ಹಾಕಿ, ಕಡಲೆ ಬೇಳೆ ಹದ ಕಾಯುತ್ತಾ ಬರುವಾಗ ಮೂರು ದೊಡ್ಡ ಚಮಚ ದಷ್ಟು ನೆಲಗಡಲೆಯನ್ನು ಹಾಕಿ. ಉರ್ದು ಬೇಳೆ ಒಂದು ದೊಡ್ಡ ಚಮಚದಷ್ಟು, ಮೂರು ಬ್ಯಾಡಗಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಚಿಕ್ಕ ಚಮಚ ದಷ್ಟು ಜೀರಿಗೆ, ಕರಿಬೇವಿನ ಸೊಪ್ಪು ಐದು ಕಾಯಿ ಮೆಣಸು ಉದ್ದವಾಗಿ ಹಚ್ಚಿದ, ತೆಂಗಿನ ಕಾಯಿ ಚಿಕ್ಕದಾಗಿ ತುರಿದದದನ್ನು ಸೇರಿಸಿ ಚೆನ್ನಾಗಿ ಸೌಟ್ ನಿಂದಾ ಮಗುಚಿ. ಅದು ಹದವಾಗಿ ಬಾಡುವವರೆಗೆ ಮಗುಚಿ. ನಂತರ ಗೇರುಬೀಜ ಹಾಕಿ, ನಂತರ ಚಿಕ್ಕ ಚಮಚ ದಷ್ಟು ಉಪ್ಪು ಬೆರೆಸಿ. ತುರಿದ ತೆಂಗಿನಕಾಯಿ ಕಂದು ಬಣ್ಣಕ್ಕೆ ತಿರುಗಿದಾಗ ಸ್ಟೌವ್ ಆಫ್ ಮಾಡಿ.
  • ಇನ್ನೂ ಬೇಯುತ್ತಾ ಇರುವ ಅಕ್ಕಿಯ ಕಡೆ ಗಮನ ಕೊಡುವ.ಈಗ ಸಾಧಾರಣವಾಗಿ ಅಕ್ಕಿ ಬೆಂದಿದೆ.ನಂತರ ಅದಕ್ಕೆ ನಾವು ಈಗ ತಯಾರಿಸಿ ಇಟ್ಟ ಒಗ್ಗರಣೆಯನ್ನು ಹಾಕಿ ಮಿಕ್ಸ್ ಮಾಡಿ.ನಂತರ ಕಾಲು ಕಟ್ಟಿನಸ್ತೂ ಕೊತ್ತಂಬರಿ ಸೊಪ್ಪು ಬೆರೆಸಿ ಮಿಕ್ಸ್ ಮಾಡಿ.ಈಗ ಅನ್ನವು ಚೆನ್ನಾಗಿ ಬೆಂದಿದೆ. ಈಗ ಸ್ಟೌವ್ ಆಫ್ ಮಾಡಿ.
  • ಇದನ್ನೂ ನೀವೂ ಹಾಗೇ ತಿನ್ನಬಹುದು.ಇಲ್ಲವೇ ಕೋಳಿ ಸಾಂಬಾರ್ ಜೊತೆಗೆ ಸವಿಯಬಹುದು.

Cabbage Upkari in Kannada ಕ್ಯಾಬೇಜ್ ಉಪ್ಕರಿ ರೆಸಿಪಿ ಕನ್ನಡ

Egg Puffs Recipe in Kannada ಎಗ್ ಪಫ್ಸ್ ರೆಸಿಪಿ

Gobi Manchurian in Kannada ಗೋಬಿ ಮಂಚೂರಿಯನ್

ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Continue Reading ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

Continue Reading ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

Continue Reading ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

Continue Reading ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Continue Reading ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Leave a Comment

x
error: Content is protected !!