Drumstick recipes south indian style ನುಗ್ಗೆಕಾಯಿ ಸಾಂಬಾರ್

Drumstick recipes south indian style: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ನುಗ್ಗೆಕಾಯಿ ಸಾಂಬಾರ್ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Drumstick Recipe

Drumstick recipes south indian style ಮಾಡಲು ಬೇಕಾಗುವ ಸಾಮಗ್ರಿಗಳು

  • 150g ಅಷ್ಟು ನುಗ್ಗೆ ಕಾಯಿ Drumstick
  • ತೊಗರಿ ಬೇಳೆ Toor dal 200g
  • ಅರ್ದ ದೊಡ್ಡ ಚಮಚ ದಷ್ಟು ಕರಿ ಬೇವಿನ ಸೊಪ್ಪು Curry Leaves 2g
  • ಆರರಿಂದ ಎಂಟು ಎಸಳು ಬೆಳ್ಳುಳ್ಳಿ Garlic 10g
  • ಒಂದು ಈರುಳ್ಳಿ ಚಿಕ್ಕದಾಗಿ ಹಚ್ಚಿದ Onion 68g
  • ಎರಡೂ ಟೊಮ್ಯಾಟೋ ಹೆಚ್ಚಿದ 162g
  • ಅರ್ದ ಚಿಕ್ಕ ಚಮಚ ದಷ್ಟು ಅರಿಸಿನ ಪುಡಿ Turmaric Powder 2g
  • ಒಂದರಿಂದ ಎರಡು ಚಿಕ್ಕ ಚಮಚದಷ್ಟು ಸಾಸಿವೆ Musturd seed 5g
  • ಒಂದುವರೆ ಚಿಕ್ಕ ಚಮಚ ದಷ್ಟು ಜೀರಿಗೆ Cumin seeds 5g
  • ಮೂರು ಚಿಕ್ಕ ಚಮಚ ದಷ್ಟು ಕೊತ್ತಂಬರಿ ಬೀಜ Coriander seed 9g
  • ಅರ್ದ ಚಿಕ್ಕ ಚಮಚ ದಷ್ಟು ಕರಿ ಮೆಣಸಿನ ಪುಡಿ Black Pepper corns 2g
  • ಎಂಟರಿಂದ ಹತ್ತು ಬ್ಯಾಡಗಿ ಮೆಣಸಿನಕಾಯಿ 17g
  • ಒಂದು ಗಡಿ ತೆಂಗಿನ ಕಾಯಿ ತುರಿದ Coconut 122g
  • ಒಂದೂ ಚಿಕ್ಕ ಚಮಚ ದಷ್ಟು ಹುಣಸೆ ಹುಳಿ Tamarind 9g
  • ಉಪ್ಪು ರುಚಿಗೆ ತಕ್ಕಷ್ಟು
  • ತೆಂಗಿನ ಎಣ್ಣೆ 40ml 29g

ಅಮೆಜಾನ್ Grocery Store Visit ಮಾಡಿ

ನುಗ್ಗೆಕಾಯಿ ಸಾಂಬಾರ್ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು

Step 1
Step 2
  • ಮೊದಲು ಚೆನ್ನಾಗಿ ತೊಳೆದು ಇಟ್ಟಿರುವ ತೊಗರಿ ಬೇಳೆಯನ್ನು ಪ್ರೆಷರ್ ಕುಕ್ಕರ್ ನಲ್ಲಿ ತೆಗೆದುಕೊಳ್ಳಿ.ಹಾಗೇ ಅರಶಿನ ಪುಡಿ,ಹಾಗೇ ತೊಗರಿ ಬೇಳೆಯನ್ನು ಬೇಯಿಸಲು ಬೇಕಾದಷ್ಟು ನೀರನ್ನೂ ಹಾಕಿ. ನಂತರ ಮುಚ್ಚಳ ಹಾಕಿ. ನಾಲ್ಕೂ ಸಿಟಿ ತೆಗೆಯಿರಿ.
  • ಈ ಹೊತ್ತಿನಲ್ಲಿ ಮಸಾಲೆ ತಯಾರು ಮಾಡುವ ಅದಕ್ಕೆ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ಬಾಣಲೆ ಬಿಸಿ ಆದಾಗ ತೆಂಗಿನ ಎಣ್ಣೆ ಹಾಕಿ.ಈಗ ಎಣ್ಣೆ ಕಾಯುತ್ತಾ ಬರುವಾಗ ಬ್ಯಾಡಗಿ ಮೆಣಸಿನಕಾಯಿ ಹಾಕಿ.ನಂತರ ಚೆನ್ನಾಗಿ ಸೌಟ್ ನಿಂದಾ ಮಗುಚಿ.ಹಾಗೇ ಸಾಸಿವೆ,ಕೊತ್ತಂಬರಿ ಬೀಜ ,ಜೀರಿಗೆ, ಕರಿ ಮೆಣಸು, ಬೆಳ್ಳುಳ್ಳಿ, ಅದೇ ರೀತಿ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಮಗುಚಿ. ಈಗ ಮಸಾಲೆ ಪರಿಮಳ ಅಡುಗೆ ಮನೆಯಲ್ಲಿ ಬರುವಾಗ ಸ್ಟೌವ್ ಆಫ್ ಮಾಡಿ.ಹಾಗೇ ಬಿಸಿ ಆರಲು ಬಿಡಿ.
  • ಈಗ ಮಸಾಲೆ ಅನ್ನು ರುಬ್ಬಿಕೊಳ್ಳಿ ಅದಕ್ಕೆ ಒಂದು ಮಿಕ್ಸಿ ಬ್ಲಂಡರ್ ಜಾರ್ ತಗೊಳ್ಳಿ ಅದಕ್ಕೇ ಬಿಸಿ ಆರಲು ಬಿಟ್ಟ ಮಸಾಲೆಯ ಅನ್ನು ಹಾಕಿ ಹಾಗೇ ತುರಿದ ತೆಂಗಿನಕಾಯಿ, ಹಾಗೇ ರಬ್ಬಿಕೊಳಲು ಬೇಕಾದ ಅಷ್ಟು ನೀರನ್ನೂ ಹಾಕಿ ಸಣ್ಣವಾಗಿ ರುಬ್ಬಿಕೊಳ್ಳಿ.
  • ಈಗ ಸಾಂಬಾರಿಗೆ ಒಗ್ಗರಣೆ ತಯಾರು ಮಾಡುವ ಅದಕ್ಕೆ ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ಬಾಣಲೆ ಬಿಸಿ ಆದಾಗ ತೆಂಗಿನ ಎಣ್ಣೆ ಹಾಕಿ ಎಣ್ಣೆ ಕಾಯುತ್ತಾ ಬರುವಾಗ ಸಾಸಿವೆಯನ್ನು ಹಾಕಿ.ಈಗ ಸಾಸಿವೆ ಹೂಡಿಯುವಾಗ ಕರಿ ಬೇವಿನ ಸೊಪ್ಪು ಹಾಕಿ.ನಂತರ ಉಳಿದಿರುವ ಬೆಳ್ಳುಳ್ಳಿ ಹಾಕಿ ಮಗುಚಿ, ಈಗ ಬೆಳ್ಳುಳ್ಳಿ ಬಾಡೂತಾ ಬರುವಾಗ ಉಳಿದಿರುವ ಬೆಳ್ಳುಳ್ಳಿ ಹಾಕಿ ಮಗುಚಿ. ಈಗ ಬೆಳ್ಳುಳ್ಳಿ ಬಾಡೂತಾ ಬರುವಾಗ ಚಿಕ್ಕದಾಗಿ ಹೆಚ್ಚಿದ ಟೊಮ್ಯಾಟೊ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಟೊಮ್ಯಾಟೋ ಮೆದುವಾಗಿ ಬೇಂದ ನಂತರ ನುಗ್ಗೆಯ ದಂಡನ್ನು. ಹಾಕಿ ಮಿಕ್ಸ್ ಮಾಡಿಕೊಳ್ಳಿ.ಈಗ ಸ್ವಲ್ಪ ನೀರನ್ನು ಹಾಕಿ ಹಾಗೆಯೇ ಹದ ಬೆಂಕಿಯಲ್ಲಿ ನುಗ್ಗೆಯನ್ನು ಬೇಯಿಸಿ.ಈಗ ಮುಚ್ಚಲ ತೆಗೆದು ನೋಡಿದರೆ ನುಗ್ಗೆ ಚೆನ್ನಾಗಿ ಬೆಂದಿದೆ.ಈಗ ಸ್ವಲ್ಪ ಹಿಂದೆ ಕುಕ್ಕಾರಲ್ಲಿ ಬೇಯಿಸಿದ ತೊಗರಿ ಬೇಳೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು, ಸ್ವಲ್ಪ ಹಿಂದೆ ಅರೆಡಿರುವಾ ಮಸಾಲೆಯನ್ನು ಸೇರಿಸಿ ಸೌಟ್ ನಿಂದಾ ಮಗುಚಿ.ಈಗ ಯಾವ ಜಾರ್ ಅಲ್ಲಿ ಮಸಾಲೆ ತಯಾರು ಮಾಡಿದ್ದೀರಿ. ಅದೇ ಜಾರ್ ಅಲ್ಲಿ ಸ್ವಲ್ಪ ನೀರನ್ನೂ ಸೇರಿಸಿ ಹಾಕಿ.ಕುದಿಯಲು ಸ್ವಲ್ಪ ಹೊತ್ತು ಬಿಡಿ. ಈಗ ಗುಳ್ಳೆಯ ರೀತಿಯಲ್ಲಿ ಬೆಯುವಾಗಾ ಸ್ಟೌವ್ ಆಫ್ ಮಾಡಿ.
  • ಈಗ ನುಗ್ಗೆ ಸಾಂಬಾರು ತಯಾರಾಗಿದೆ. ಇದರಲ್ಲಿ ನೂರು ಗ್ರಾಂ ಗೆ ಸುಮಾರು 72 ಕಿಲೋ ದಷ್ಟು ಕ್ಯಾಲರಿ ಇದೆ.

Egg fried rice in kannada ಎಗ್ ಫ್ರೈಡ್ ರೈಸ್ ರೆಸಿಪಿ

Summary
recipe image
Review Date
Reviewed Item
Drumstick recipes south indian style ನುಗ್ಗೆಕಾಯಿ ಸಾಂಬಾರ್
Author Rating
51star1star1star1star1star
Recipe Name
Drumstick recipes south indian style ನುಗ್ಗೆಕಾಯಿ ಸಾಂಬಾರ್

Leave a Comment

error: Content is protected !!