Egg fried rice in kannada : ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಎಗ್ ಫ್ರೈಡ್ ರೈಸ್ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Egg fried rice in kannada ಮಾಡಲು ಬೇಕಾಗುವ ಸಾಮಗ್ರಿಗಳು
- ಆರು ಹಸಿ ಮೊಟ್ಟೆ Raw egg
- ಒಂದುವರೆ ಕಪ್ ಅಷ್ಟು ಬಾಸ್ಮತಿ ಅಕ್ಕಿ
- ಒಂದು ಇಂಚಿನಷ್ಟು ಶುಂಠಿ ಚಿಕ್ಕದಾಗಿ ಹಚ್ಚಿದ Ginger
- ಒಂದು ಬೆಳ್ಳುಳ್ಳಿ ಚಿಕ್ಕದಾಗಿ ಹಚ್ಚಿದ Garlic
- ಒಂದು ಕಟ್ಟಿ ನಸ್ಟ Spring onion Bulb ಹಚ್ಚಿದ
- ಒಂದು ಕಟ್ಟ್ ಅಷ್ಟು Spring onion Green ಎಲೆಯ ಭಾಗ ಚಿಕ್ಕದಾಗಿ ಹಚ್ಚಿದ
- ಒಂದು ದೊಣ್ಣೆ ಮೆಣಸಿನಕಾಯಿ ಸಣ್ಣ ವಗಿ ಹಚ್ಚಿದ
- ಎರಡೂ ಚಿಕ್ಕ ಚಮಚ ದಷ್ಟು Black pepper Powder ಕರಿ ಮೆಣಸಿನ ಪುಡಿ
- ಒಂದು ದೊಡ್ಡ ಚಮಚ ದಷ್ಟು ಡಾರ್ಕ್ ಸೋಯ ಸಾಸ್ Dark Soya Sauce
- ಒಂದು ದೊಡ್ಡ ಚಮಚ ದಷ್ಟು ವಿನೇಗರ್ Vinegar
- ಉಪ್ಪು ರುಚಿಗೆ ತಕ್ಕಷ್ಟು
- 50ml Olive oil
Amazon Grocery Store Visit ಮಾಡಿ
ಎಗ್ ಫ್ರೈಡ್ ರೈಸ್ ಮಾಡುವ ವಿಧಾನ


- ಒಂದು ಕುಕ್ಕರ್ ಅಲ್ಲಿ ಚೆನ್ನಾಗಿ ತೊಳೆದು ಇಟ್ಟಿರುವ ಬಾಸ್ಮತಿ ಅಕ್ಕಿಯನ್ನು ತೆಗೆದುಕೊಳ್ಳಿ. ನಂತರ ಮೂರೂ ಕಪ್ ಅಷ್ಟು ನೀರನ್ನೂ ಸೇರಿಸಿ. ನಂತರ ಚಮಚದಿಂದ ಬಾಸ್ಮತಿ ಅಕ್ಕಿಯನ್ನು ಸರಿ ಮಾಡಿಕೊಳ್ಳಿ. ನಂತರ ಒಂದು ಸಿಟಿಯಷ್ಟು ಬೇಯಿಸಿ. ಈ ಹೊತ್ತಿನಲ್ಲಿ ಈರುಳ್ಳಿ ಸ್ಪ್ರಿಂಗ್ ಆನಿಯನ್ ಲೀವೆಸ್ Spring onion leaves ಅನ್ನು ಹಚ್ಚಿಕೊಳ್ಳಿ. ಅದರ ಎಲೆಯ ಭಾಗ ಎರಡು cm ಅಷ್ಟು ಇಟ್ಟುಕೊಳ್ಳಿ. ಈಗ ಅಕ್ಕಿ ಬೆಂದಿದೆಯ ಎಂದು ನೋಡಿ ನಂತರ ಸ್ಟೌವ್ ಆಫ್ ಮಾಡಿ.
- ಈಗ ಮೊಟ್ಟೆಯನ್ನು ಕಾಯಿಸುವ ಅದಕ್ಕೆ ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ನಂತರ ಆಲಿವ್ ಆಯಿಲ್ ಅನ್ನು ಹಾಕಿ, ಬಿಸಿ ಮಾಡಿ. ನಂತರ ಮೊಟ್ಟೆಯನ್ನು ಒಡೆದು ಹಾಕಿ.ರುಚಿಗೆ ಸ್ವಲ್ಪ ಕರಿ ಮೆಣಸು ಮೊಟ್ಟೆಯ ಮೇಲೆ ಹಾಕಿ,ಹಾಗೇ ರುಚಿಗೆ ತಕ್ಕಷ್ಟು ಸ್ಪಲ್ಪ ಉಪ್ಪನ್ನು ಬೆರೆಸಿ. ಸ್ವಲ್ಪ ಹೊತ್ತು ಸೌಟ್ ನಿಂದಾ ಮಗುಚಿ. ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿ. ಮೇಲಿನ ಚಿತ್ರದಲ್ಲಿ ತೋರಿಸಿದ ಹಾಗೇ ತಯಾರು ಮಾಡಿ. ನಂತರ ಅದನು ಬೇರೆ ಪಾತ್ರೆಯಲ್ಲಿ ತೆಗೆದು ಇಡಿ.
- ಈಗ ಫ್ರೈಡ್ ರೈಸ್ ತಯಾರು ಮಾಡುವ ಅದಕ್ಕೆ ಅದೇ ಬಾಣಲೆಯನ್ನು ಇನ್ನೊಮ್ಮೆ ಸ್ಟೌವ್ ಮೇಲೆ ಇಡಿ.ಹಾಗೇ ಎಣ್ಣೆಯನ್ನೂ ಹಾಕಿ. ಸಣ್ಣಗೆ ಹೆಚ್ಚಿದ ಶುಂಠಿ ಹಾಕಿ. ಸ್ವಲ್ಪ ಹೊತ್ತು ಮಗುಚಿ.ಹಾಗೇ ಬೆಳ್ಳುಳ್ಳಿ, ಸ್ಪ್ರಿಂಗ್ ಆನಿಯನ್ ಬಲ್ಬ್ ಈರುಳ್ಳಿ ಯ ಭಾಗ ಹಾಕಿ ಮಗುಚಿ.ಹಾಗೇ ಚಿಕ್ಕದಾಗಿ ಹಚ್ಚಿದ ದೊಣ್ಣೆ ಮೆಣಸಿನಕಾಯಿ ಹಾಕಿ ಮಗುಚಿ.ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಈಗ ಸಾಸ್ ಹಾಕುವ ಮೊದಲಿಗೆ ಕಡು ಸೋಯಾ ಸಾಸ್, ಹಾಗೇ ವಿನೇಗರ್, ನಂತರ ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಸ್ವಲ್ಪ ಹಿಂದೆ ಬೇಯಿಸಿ ಇಟ್ಟ ಬಾಸ್ಮತಿ ಅಕ್ಕಿಯನ್ನು ಹಾಕಿ. ನಂತರ ಸೌಟ್ ನಿಂದಾ ಮಗುಚಿ,ಹಾಗೇ ಸ್ವಲ್ಪ ಹಿಂದೆ ಮಾಡಿ ಇಟ್ಟ ಮೊಟ್ಟೆ ಗುರ್ಜಿ ಅನ್ನು ಕೂಡ ಹಾಕಿ, ಅದೇ ರೀತಿ ಸ್ಪ್ರಿಂಗ್ ಆನಿಯನ್ ಎಲೆಯ ಭಾಗ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಇನ್ನೂ ಹೆಚ್ಚು ಹೊತ್ತು ಬೇಯಿಸುವ ಅಗತ್ಯ ಇಲ್ಲ. ಸ್ಟೌವ್ ಆಫ್ ಮಾಡಿ.
- ಈಗ ರುಚಿಯಾದ ಎಗ್ ಫ್ರೈಡ್ ರೈಸ್ ರೆಸಿಪಿ ಸವಿಯಲು ಸಿದ್ಧವಾಗಿದೆ.