Egg Varuval recipe in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಎಗ್ ವರುವಲ್ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Egg Varuval recipe in kannada ಮಾಡಲು ಬೇಕಾಗುವ ಸಾಮಗ್ರಿಗಳು
- ಹದಿನೈದು ಬೇಯಿಸಿದ ಮೊಟ್ಟೆ 792g
- ಹದಿನೈದು ಬ್ಯಾಡಗಿ ಮೆಣಸಿನಕಾಯಿ ಇಲ್ಲಿ ಹತ್ತು ಮಸಾಲೆಗೆ ಐದು ಒಗ್ಗರಣೆಗೆ
- ಒಂದು ಚಿಕ್ಕ ಚಮಚ ದಷ್ಟು ಅರಶಿನ ಪುಡಿ 3g
- ಒಂದು ಚಿಕ್ಕ ಚಮಚ ದಷ್ಟು ಗರಂ ಮಸಾಲ ಪುಡಿ 3g
- ಒಂದುವರೆ ದೊಡ್ಡ ಚಮಚ ದಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್ 33g
- ಒಂದು ಲಿಂಬೆ ರಸ 15g
- ನಾಲ್ಕೂ ಗಂಟು ಕರಿ ಬೇವಿನ ಸೊಪ್ಪು 8g
- ಎರಡೂ ದೊಡ್ಡ ಚಮಚ ದಷ್ಟು ಗೇರು ಬೀಜ Cashewnuts 31g
- ಉಪ್ಪು ರುಚಿಗೆ ತಕ್ಕಷ್ಟು
- ತುಪ್ಪ Ghee 66g
ಎಗ್ ವರುವಲ್ ರೆಸಿಪಿ ಮಾಡುವ ವಿಧಾನ ತಿಳಿಯೋಣ


- ಒಂದು ಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟು ಅದಕ್ಕೇ ಸ್ವಲ್ಪ ನೀರನ್ನು ಸೇರಿಸಿ. ನಂತರ ಬ್ಯಾಡಗಿ ಮೆಣಸು ಹಾಕಿ. ಸೌಟ್ ನಿಂದಾ ಮಿಕ್ಸ್ ಮಾಡಿ.ನೀರು ಕುದಿಯುವಾಗ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಿ.ನಂತರ ಸ್ವಲ್ಪ ಸಪ್ಪೆ ನೀರಲ್ಲಿ ಬ್ಯಾಡಗಿ ಮೆಣಸು ಹಾಕಿ ತೆಗೆಯಿರಿ.
- ನಂತರ ಅದನ್ನು ಮಿಕ್ಸಿ ಬ್ಲಂಡರ್ ಜಾರ್ ತಗೊಂಡು ಅದಕ್ಕೆ ಸಪ್ಪೆ ನೀರಲ್ಲಿ ಹಾಕಿ ತೆಗೆದ ಬ್ಯಾಡಗಿ ಮೆಣಸು ಹಾಕಿ.ನಂತರ ಸ್ವಲ್ಪ ನೀರು ಹಾಕಿ. ಸಣ್ಣವಾಗೀ ರುಬ್ಬಿ ಇಟ್ಟುಕೊಳ್ಳಿ.
- ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಸ್ಟೌವ್ ಮೇಲೆ ಇಟ್ಟು ಆನ್ ಮಾಡಿ.ನಂತರ ಅದಕ್ಕೆ ಕರಿ ಬೇವಿನ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಏಕೆಂದರೆ ಕರಿ ಬೇವಿನ ಸೊಪ್ಪು ಅಲ್ಲಿ ನಿರಿನ ತೇವಾಂಶವಿರುತದೆ ಅದನ್ನು ತೆಗೆಯಲು. ನಂತರ ತುಪ್ಪವನ್ನು ಹಾಕಿ. ತುಪ್ಪ ಕರಗುತ್ತಾ ಬರುವಾಗ ಒಗ್ಗರಣೆಗೆ ಇಟ್ಟ ಬ್ಯಾಡಗಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಮಗುಚಿ. ನಂತರ ಗೇರುಬೀಜ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದರ ಹಸಿ ಪರಿಮಳ ಹೋಗುವ ವರೆಗೆ ಮಗುಚಿ.ಅನಂತರ ಅರಶಿನ ಪುಡಿ,ಕೊನೆಗೆ ನಾವು ಮಿಕ್ಸಿಯಲ್ಲಿ ಆರೆದಿರುವಾ ಮಸಾಲೆಯನ್ನು ಹಾಕಿ, ಮಿಕ್ಸಿ ಚಾಲೂ ಮಾಡಿ, ಹಾಗೆ ಉಳಿದಿರುವ ಮಸಾಲೆಗೆ ನೀರನ್ನು ಹಾಕಿ,ಬಾಣಲೆಗೆ ಸುರಿಯಿರಿ. ಹಾಗೇಯೆ ಮನೆಯಲ್ಲಿ ಪುಡಿ ಮಾಡಿದ ಗರಂ ಮಸಾಲ ಪುಡಿ ಹಾಕಿ, ಲಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸುಮಾರು ಐದು ನಿಮಿಷಗಳ ಕಾಲ ಮಗುಚಿದ ನಂತರ ಬೇಯಿಸಿದ ಮೊಟ್ಟೆಯನ್ನು ಹಾಕಿ, ಮಸಾಲೆಯನ್ನು ಚೆನ್ನಾಗಿ ಕೋಟ್ ಮಾಡಿಕೊಳ್ಳಿ. ನಂತರ ರುಚಿನೋಡಿ ಉಪ್ಪನ್ನು ಬೆರೆಸಿ ನಂತರ ಹೆಚ್ಚು ಬೇಯಿಸುವ ಅಗತ್ಯವಿಲ್ಲ. ಸ್ಟೌವ್ ಆಫ್ ಮಾಡಿ.
- ಈಗ ಎಗ್ ವರುವಲ್ ರೆಸಿಪಿ ಸವಿಯಲು ಸಿದ್ಧವಾಗಿದೆ. ಇದು ಅತ್ಯಂತ ಸುಲಭದ ಅಡುಗೆ ಇದನ್ನೂ ನೀವೂ ಮನೆಯಲ್ಲಿ ಮಾಡಿ ಹೇಗಿದೆ ಎಂದು ತಿಳಿಸಿ. ಇದರಲ್ಲಿ ನೂರು ಗ್ರಾಂ ಗೆ ಸುಮಾರು 171.3ಕಿಲೋ ದಷ್ಟು ಕ್ಯಾಲರಿ ಇದೆ.
Homemade pizza recipe in kannada ಪಿಜ್ಜಾ ಕನ್ನಡ ರೆಸಿಪಿ