Ghee rice recipes in kannada : ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಘೀ ರೈಸ್ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Ghee rice recipes in kannada ಮಾಡಲು ಬೇಕಾಗುವ ಸಾಮಗ್ರಿಗಳು
- Basmati rice ಬಾಸ್ಮತಿ ಅಕ್ಕಿ 1015g
- ಎರಡು ಈರುಳ್ಳಿ Onion ಉದ್ದವಾಗಿ ಹಚ್ಚಿದ 203g
- ಒಂದು ಚಿಕ್ಕ ಚಮಚ ದಷ್ಟು ಶಾ ಜೀರಿಗೆ Caramay seeds 4g
- ಒಂದು ಲಿಂಬೆ ರಸ Lemon juice 24g
- ಒಂದು ಒಂದು ಇಂಚಿನಷ್ಟು ಚಕ್ಕೆ Cinnamon stick
- ಒಂದು ಸ್ಟಾರ್ ಅನಿಸೇ Star Anise
- ನಾಲ್ಕೂ ಏಲಕ್ಕಿ Green Cardamom
- Bay leaves ಕಂಕುಳ ಎಲೆ
- ಬಿರಿಯಾನಿ ಎಲೆ Pandaunus Leaves
- ಉಪ್ಪು ರುಚಿಗೆ ತಕ್ಕಷ್ಟು
- ತುಪ್ಪ Ghee 80g
Amazon Grocery Store Visit ಮಾಡಿ
ಘೀ ರೈಸ್ ರೆಸಿಪಿ ಮಾಡುವ ವಿಧಾನ

- ಮೊದಲು ತೊಳೆದು ಇಟ್ಟಿರುವ ಬಾಸ್ಮತಿ ಅಕ್ಕಿಯನ್ನು ಅರ್ದ ತಾಸು ನೀರಲ್ಲಿ ನೆನೆ ಹಾಕಿ ಇಡಿ.ನಂತರ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ.ತುಪ್ಪ ಕರಗುತ್ತಾ ಬರುವಾಗ ಜೀರಿಗೆಯನ್ನು ಹಾಕಿ, ನಂತರ ಚಕ್ಕೆ, ಸ್ಟಾರ್ ಅಣಿಸೆ, ಏಲಕ್ಕಿ ನಂತರ ಈರುಳ್ಳಿ ಹಾಕಿ. ಹಾಗೆ ಈರುಳ್ಳಿ ಕಾಯುವ ಸಲುವಾಗಿ ಸ್ವಲ್ಪ ಉಪ್ಪನ್ನು ಬೆರೆಸಿ.ನಿಮ್ಮ ಅಳತೆಗೆ ಎರಡು ಚಿಕ್ಕ ಚಮಚ ದಷ್ಟು ಸಾಕು.ನಂತರ ಸೌಟ್ ನಿಂದಾ ಮಗುಚಿ.ಅದೇ ರೀತಿ ಕಂಕೂಲದ ಎಲೆ , ಬಿರಿಯಾನಿ ಎಲೆಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಮಗುಚಿ ನಂತರ ಅದಕ್ಕೆ ನೆನೆ ಹಾಕಿ ಇಟ್ಟ ಬಾಸ್ಮತಿ ಅಕ್ಕಿಯನ್ನು ಸೇರಿಸಿ.ಈಗ ನೀರು ನಿಮ್ಮ ಅಳತೆಗೆ ಒಂದು ಲೋಟ ಅಕ್ಕಿಗೆ ಎರಡು ಲೋಟದಷ್ಟು ನೀರು ಹಾಕಿ. ಹಾಗೇ ನಿಂಬೆ ರಸ ಸವರಿ.
- ನಂತರ ಮೂರೂ ಚಿಕ್ಕ ಚಮಚ ದಷ್ಟು ಉಪ್ಪನ್ನು ಬೆರೆಸಿ.ಹಾಗೇ ಹದ ಬೆಂಕಿಯಲ್ಲಿ ಬೇಯಿಸಿ. ಸೌಟ್ ನಿಂದಾ ಮಗುಚಲೂ ಹೋಗಬೇಡಿ.ಏಕೆಂದರೆ ಅಕ್ಕಿ. ಹುಡಿ ಆಗುವ ಸಂಭವ ಹೆಚ್ಚು. ಹಾಗೇ ಬೇಯಿಸಿ, ನಂತರ ಇಲ್ಲಿ ಐದು ನಿಮಿಷ ಮುಚ್ಚಳ ಹಾಕಿ ಬೇಯಿಸಿ. ನಂತರ ಸ್ಟೌವ್ ಆಫ್ ಮಾಡಿ.ಹಾಗೇ ಹತ್ತು ನಿಮಿಷ ಬಿಡಿ. ಆಗ ಬಾಸ್ಮತಿ ಅಕ್ಕಿ ಚೆನ್ನಾಗಿ ಬೆಂದಿರುತದೆ.
- ಈಗ ಘೀ ರೈಸ್ ರೆಸಿಪಿ ಸವಿಯಲು ಸಿದ್ಧವಾಗಿದೆ. ಇದನ್ನೂ ನೀವೂ ಚಿಕನ್ ಗ್ರೀನ್ ಮಸಾಲ ದ ಜತೆ ಸವಿದರೆ ಬಹಳ ಚೆನ್ನಾಗಿರುತ್ತದೆ.
ಇದನ್ನು ಓದಿ 👇👇
Chicken Green Masala in Kannada ಚಿಕನ್ ಗ್ರೀನ್ ಮಸಾಲ
Maruvai fish basale mangalore style Recipe ಬಸಲೆ ಮರುವೈ
Moong dal curry in kannada | ಮೂಂಗ್ ದಾಲ್ ರೆಸಿಪಿ