Jackfruit seeds recipe in Kannada ಹಲಸಿನ ಹಣ್ಣಿನ ಸುಕ್ಕಾ

Jackfruit seeds recipe in Kannada: ಈ ಒಂದೂ ಆರ್ಟಿಕಲ್ ನಲ್ಲಿ ನಾವು ಇಂದು ಹಲಸಿನ ಹಣ್ಣಿನ ಸುಕ್ಕಾ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Jackfruit seeds recipe

Jackfruit seeds recipe in Kannada ಮಾಡಲು ಬೇಕಾಗುವ ಸಾಮಗ್ರಿಗಳು

Step 1
Step 2
  • ಹಲಸಿನ ಹಣ್ಣಿನ ಬೀಜ Jack Fruit seed 282g
  • ಒಂದು ಚಿಕ್ಕ ಚಮಚ ದಷ್ಟುಕರಿ ಬೇವಿನ ಸೊಪ್ಪು Curry Leaves 2g
  • ಒಂಬತ್ತು ಎಸಳು ಬೆಳ್ಳುಳ್ಳಿ Garlic 7g
  • ಒಂದು ಈರುಳ್ಳಿ ಚಿಕ್ಕದಾಗಿ ಹಚ್ಚಿದ Onion 92g
  • ಎರಡೂ ಟೊಮ್ಯಾಟೋ ಚಿಕ್ಕದಾಗಿ ಹಚ್ಚಿದ 212g
  • ಒಂದು ಚಿಕ್ಕ ಚಮಚ ದಷ್ಟು ಅರಶಿನ ಪುಡಿ Turmaric Powder 3g
  • ಒಂದುವರೆ ಚಿಕ್ಕ ಚಮಚ ದಷ್ಟು ಸಾಸಿವೆ Musturd seed 2g
  • ಎರಡೂ ಚಿಕ್ಕ ಚಮಚ ದಷ್ಟು ಕೊತ್ತಂಬರಿ ಬೀಜ Coriander seeds 7g
  • ಅರ್ದ ಚಿಕ್ಕ ಚಮಚ ದಷ್ಟು ಕರಿ ಮೆಣಸು Black pepper corns 2g
  • ಏಳು ಬ್ಯಾಡಗಿ ಮೆಣಸಿನಕಾಯಿ Byadagi Red Chilies 18g
  • ಒಂದು ಗಡಿ ತೆಂಗಿನ ಕಾಯಿ ತುರಿದ Coconut 81g
  • ಉಪ್ಪು ರುಚಿಗೆ ತಕ್ಕಷ್ಟು
  • Sunflower oil ಎಣ್ಣೆ 36g

ಅಮೆಜಾನ್ Grocery Store Visit ಮಾಡಿ

ಹಲಸಿನ ಹಣ್ಣಿನ ಸುಕ್ಕಾ ಮಾಡುವ ವಿಧಾನ ತಿಳಿಯೋಣ

  • ಈಗ ಮಸಾಲೆಯನ್ನು ಬಿಸಿ ಮಾಡುವ ಅದಕ್ಕೆ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ಬಾಣಲೆ ಸ್ವಲ್ಪ ಬಿಸಿ ಆದಾಗ ಎಣ್ಣೆ ಹಾಕಿ.ಎಣ್ಣೆ ಕಾಯುತ್ತಾ ಬರುವಾಗ ಬ್ಯಾಡಗಿ ಮೆಣಸು ಹಾಕಿ ಮಗುಚಿ. ಕರಿಮೆಣಸು,ಕೊತ್ತಂಬರಿ ಕೊನೆಗೆ ಜೀರಿಗೆ ಹಾಕಿ ಮಗುಚಿ.ಮಸಾಲೆ ಪರಿಮಳ ಅಡುಗೆ ಮನೆಯಲ್ಲಿ ಬರುವಾಗ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಬೇಕು.
  • ಈಗ ಮಸಾಲೆಯನ್ನು ರುಬ್ಬಿಕೊಳ್ಳಿ.ಅದಕ್ಕೆ ಒಂದು ಮಿಕ್ಸಿ ಬ್ಲಂಡರ್ ಜಾರ್ ತಗೊಳ್ಳಿ. ಅದಕ್ಕೆ ಬಿಸಿ ಮಾಡಿ ಇಟ್ಟ ಮಸಾಲೆಯನ್ನು ಹಾಕುತ್ತ ಹೋಗಿ.ಈಗ ಸ್ವಲ್ಪವೂ ನೀರನ್ನೂ ಹಾಕದೆ ಮಿಕ್ಸಿ ಚಾಲೂ ಮಾಡಿ ಸಣ್ಣ ವಾಗಿ ಪುಡಿ ಮಾಡಿಕೊಳ್ಳಿ.
  • ಈಗ ಅದೇ ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ಅದನ್ನು ನೀರಿನಲ್ಲಿ ಇನ್ನೊಮ್ಮೆ ತೊಳೆಯುವ ಅಗತ್ಯವಿಲ್ಲ.ನಂತರ ಅದಕ್ಕೆ ತುರಿದ ತೆಂಗಿನಕಾಯಿ ಹಾಕಿ ಮಗುಚಿ. ಈಗ ತೆಂಗಿನಕಾಯಿ ಹದ ಕಂದು ಬಣ್ಣ ಬರುವಾಗ ಸ್ಟೌವ್ ಆಫ್ ಮಾಡಿ.
  • ಈಗ ಒಗ್ಗರಣೆ ತಯಾರು ಮಾಡುವ ಅದಕ್ಕೆ ಕುಕ್ಕರ್ ತಗೊಳ್ಳಿ . ಕುಕ್ಕರ್ ಬಿಸಿ ಆಗುವಾಗ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾಯುತ್ತಾ ಬರುವಾಗ ಸಾಸಿವೆ ಹಾಕಿ.ಸಾಸಿವೆ ಹೂಡಿಯುವಾಗ ಬೇವಿನ ಸೊಪ್ಪು ಹಾಕಿ.ಹಾಗೇ ಬೆಳ್ಳುಳ್ಳಿ ಕೂಡ ಸೇರಿಸಿ.ನಂತರ ಸಣ್ಣ ವಾಗಿ ಹಚ್ಚಿದ ಈರುಳ್ಳಿಯನ್ನು ಹಾಕಿ. ಈರುಳ್ಳಿ ಬೇಗ ಕಾಯಲು ಸ್ವಲ್ಪ ಉಪ್ಪನ್ನು ಸೇರಿಸಿ.ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದಾಗ ಅರಶಿನ ಪುಡಿ ಸೇರಿಸಿ.ಹಾಗೇ ಚಿಕ್ಕದಾಗಿ ಹಚ್ಚಿದ ಟೊಮೇಟೊವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗುದ್ದಿ ಇಟ್ಟಾಂತಹ ಹಲಸಿನ ಹಣ್ಣಿನ ಬೀಜ ಹಾಕಿ. ನಂತರ ಚೆನ್ನಾಗಿ ಮಗುಚಿ.ಈಗ ಹಲಸಿನ ಹಣ್ಣಿನ ಬೀಜ ಬೇಯಲು ಕುಕ್ಕರ್ ಮುಚ್ಚಳ ಹಾಕಿ.ಒಂದು ವಿಸಿಲ್ ತೆಗೆಯಿರಿ. ಒಂದು ವಿಸಿಲ್ ಅದ ನಂತರ ಆಗ ನಾವು ತಯಾರಿಸಿದ ಮಸಾಲೆ ಹಾಕಿ.ಹಾಗೇ ತೆಂಗಿನ ತುರಿಯನ್ನು ಹಾಕಿ. ನಂತರ ನೀರಿನ ತೇವಾಂಶ ಹಾರಿ ಹೋಗುವ ವರೆಗೆ ಮಗುಚಿ.ನಂತರ ಸ್ಟೌವ್ ಆಫ್ ಮಾಡಿ.
  • ಈಗ ರುಚಿಯಾದ ಹಲಸಿನ ಹಣ್ಣಿನ ಸುಕ್ಕಾ Jackfruit seeds recipe in Kannada ತಯಾರಾಗಿದೆ.ಇದರಲ್ಲಿ ನೂರು ಗ್ರಾಂ ಗೆ ಸುಮಾರು 170.6 ಕಿಲೋ ದಷ್ಟು ಕ್ಯಾಲರಿ ಇದೆ.

Drumstick recipes south indian style ನುಗ್ಗೆಕಾಯಿ ಸಾಂಬಾರ್

Summary
recipe image
Review Date
Reviewed Item
Jackfruit seeds recipe in Kannada ಹಲಸಿನ ಹಣ್ಣಿನ ಸುಕ್ಕಾ
Author Rating
51star1star1star1star1star
Recipe Name
Jackfruit seeds recipe in Kannada ಹಲಸಿನ ಹಣ್ಣಿನ ಸುಕ್ಕಾ

Leave a Comment

error: Content is protected !!