Kayi holige/Obbattu Recipe in Kannada ಒಬ್ಬಟ್ಟು ರೆಸಿಪಿ

Kayi holige/Obbattu Recipe in Kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಕಾಯಿ ಹೋಳಿಗೆ/ ಒಬ್ಬಟ್ಟು ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಒಬ್ಬಟ್ಟು ರೆಸಿಪಿ

Kayi holige/Obbattu Recipe in Kannada ಮಾಡಲು ಬೇಕಾಗುವ ಸಾಮಗ್ರಿಗಳು

  • Maida ಮೈದಾ ಸುಮಾರು 409g
  • ಒಂದು ದೊಡ್ಡ ಚಮಚದಷ್ಟು Chiroti Rava ಚಿರೋಟಿ ರವೆ -10g
  • ಒಂದು ಚಿಕ್ಕ ಚಮಚ ದಷ್ಟು Turmeric powder ಅರಶಿನ ಪುಡಿ -3g
  • ಎರಡು ತೆಂಗಿನ ಕಾಯಿ ತುರಿದ-233g
  • ಒಂದು ಚಿಕ್ಕ ಚಮಚ ದಷ್ಟು ಏಲಕ್ಕಿ ಪುಡಿ Green Cardamom Powder-5g
  • ಬೆಲ್ಲ Jaggery -358g
  • Sunflower oil-109g
  • ಬಾಳೆ ಎಲೆ Plantiain leaf

Amazon Grocery Store Visit

ಒಬ್ಬಟ್ಟು ರೆಸಿಪಿ ಮಾಡುವ ವಿಧಾನ

  • ಮೊದಲಿಗೆ ಒಂದು ಬ್ಲಂಡರ್ ಜಾರ್ ತೆಗೆದುಕೊಳ್ಳಿ, ನಂತರ ಅದಕ್ಕೆ ತುರಿದ ತೆಂಗಿನಕಾಯಿಯನ್ನು ಹಾಕಿ. ಹಾಗೆಯೇ ಸ್ವಲ್ಪವೂ ನೀರನ್ನೂ ಸೇರಿಸದೆ ಮಿಕ್ಸ್ ಚಾಲೂ ಮಾಡಿ. ಹಾಗೆಯೇ ಸ್ವಲ್ಪವೂ ನೀರನ್ನೂ ಹಾಕದೆ ಇದ್ದಾಗ ಮಿಕ್ಸಿ ಒಮ್ಮೆಗೇ ನಿಲ್ಲುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಹೆಚ್ಚು ಟೆನ್ಶನ್ ಮಾಡಿಕೊಳ್ಳಬೇಡಿ.
  • ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಬೆಲ್ಲವನ್ನು ಹಾಕಿ ಹಾಗೇ ಸ್ವಲ್ಪ ನೀರನ್ನು ಸೇರಿಸಿ ಕರಗಿಸಿ, ಬೆಲ್ಲ ಕರಗಿಸಲು ಸ್ಟೌವ್ ಆನ್ ಮಾಡಿ. ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಸಟುಗದಲ್ಲಿ ತಿರುಗಿಸಿ. ಬೆಲ್ಲ ಕರಗಿದೆ ಎಂದೂ ತಿಳಿಯಲು ಒಂದು ಚೂರೂ ಬೆಲ್ಲ ಕರಗಿಸಿದ ಪಾಕವನ್ನು ಸ್ವಲ್ಪ ನೀರಿಗೆ ಹಾಕಿ. ಬೆಲ್ಲದ ಪಾಕ ನೀರಲ್ಲಿ ಕರಗದೆ ಇದ್ದರೆ, ತೆಂಗಿನ ಕಾಯಿ ತುರಿಯನ್ನು ಹಾಕಬಹುದು ಎಂದು ಅರ್ಥ. ನಂತರ ಬೆಲ್ಲದ ಪಾಕಕ್ಕೆ ತೆಂಗಿನ ತುರಿಯನ್ನು ಸೇರಿಸಿ ಕರಗಿಸಿ , ಹಾಗೆಯೇ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಬೆಲ್ಲದ ತೆಂಗಿನ ಕಾಯಿ ತುರಿ ಪಾಕ ರೆಡಿಯಾಗಿದೆ. ಈಗ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಿ.
  • ಈಗ ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ಮೈದಾ ಹಾಗೂ ಚಿಕೊಟಿ ರವೆಯನ್ನು ಹಾಕಿ. ಹಾಗೆಯೇ ಸ್ವಲ್ಪ ಅರಶಿನ ಪುಡಿ ಸೇರಿಸಿ. ಸ್ವಲ್ಪ ಕಡಿಮೆ Sunflower ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸ್ವಲ್ಪವೇ ನೀರನ್ನೂ ಸೇರಿಸಿ ಮೈದಾ ಹಿಟ್ಟನ್ನು ಉಂಡೆಯ ತರ ಮಾಡಿ ಇಟ್ಟುಕೊಳ್ಳಿ.
  • ನಂತರ ನಿಮ್ಮ ತೋಟದಿಂದ, ತೋಟ ಇಲ್ಲವಾದರೆ ಪೇಟೆಯಲ್ಲಿ ಸಿಗುತ್ತದೆ. ಸ್ವಲ್ಪ ದೊಡ್ಡ ಬಾಳೆ ಎಲೆಯನ್ನು ತೆಗೆದುಕೊಳ್ಳಿ . ಕೈಯಲ್ಲಿ ಸ್ವಲ್ಪ ಎಣ್ಣೆ ತೆಗೆದುಕೊಳ್ಳಿ ಹಾಗೆಯೇ ಎಣ್ಣೆಯನ್ನು ಬಾಳೆ ಎಲೆಯ ಮೇಲೆ ಹಾಕಿ ಸವರಿ. ನಂತರ ಉಂಡೆ ಮಾಡಿ ಇಟ್ಟ ಮೈದಾ ಹಿಟ್ಟನ್ನು ಒಂದು ಚೂರ್ ತೆಗೆದುಕೊಂಡು ಅದರಲ್ಲಿ ಚಿಕ್ಕ ಗುಂಡಿಯ ತರ ಮಾಡಿ ಅದರ ಒಳಗೆ ಬೆಲ್ಲ ತೆಂಗಿನ ತುರಿ ಪಾಕವನ್ನು ಒಳಗೆ ಹಾಕಿ ಮೈದಾದಿಂದ ಮುಚ್ಚಿ. ನಂತರ ಅದನ್ನು ಬಾಳೆ ಎಲೆಯ ಮೇಲೆ ಇಡಿ. ಹಾಗೆ ಹೋಳಿಗೆ ಎಸ್ಟು ದೊಡ್ಡದು ಬೇಕು ಎಂದು ನೀವೇ ಲೆಕ್ಕ ಹಾಕಿ. ಹಾಗೇ ಬಾಳೆ ಎಲೆಯ ಮೇಲೆ ಕೈಯಿಂದ ತಟ್ಟಿ. ಹಾಗೇ ಬೇರೆ ಬೇರೆ ಬಾಳೆ ಎಲೆಯಲ್ಲಿ ನಿಮಗೆ ಎಸ್ಟು ಹೋಳಿಗೆ ಬೇಕು ಅಷ್ಟು ಮಾಡಿ ಇಟ್ಟು ಕೊಳ್ಳಿ. ನಂತರ ಕಾವಲಿ ಬಿಸಿ ಆದಾಗ ಬಾಳೆ ಎಲೆಯಲ್ಲಿ ಇರುವ ಹೋಳಿಗೆಯನ್ನು ಕಾವಲಿಯ ಮೇಲೆ ಬಾಳೆ ಎಲೆಯ ಸಹಿತ ಹಾಕಿ. ಹಾಗೇ ಹೋಳಿಗೆ/ಒಬ್ಬಟ್ಟು ಒಂದು ಕಡೆ ಬಿಸಿ ಆದ ನಂತರ, ಬಾಳೆ ಎಲೆ ಇರುವ ಕಡೆ ಸ್ವಲ್ಪ ಎಣ್ಣೆಯನ್ನು ಹಾಕಿ ಮಗುಚಿ ಹಾಕಿ. ಹಾಗೇ ಉಳಿದಿರುವ ಹೋಳಿಗೆಯನ್ನು ತಯಾರು ಮಾಡಿ.

Malpuri Bakery Style in Kannada ಮಲ್ಪೂರಿ ರೆಸಿಪಿ ಕನ್ನಡ

ಸೂಪರ್‌ಫುಡ್‌ಗಳು: ಚಳಿಗಾಲದಲ್ಲಿ ವೈರಲ್ ಸೋಂಕನ್ನು ತಪ್ಪಿಸಲು ಈ ಸೂಪರ್‌ಫುಡ್‌ಗಳನ್ನು ಆಹಾರದಲ್ಲಿ ಸೇರಿಸಿ

Continue Reading ಸೂಪರ್‌ಫುಡ್‌ಗಳು: ಚಳಿಗಾಲದಲ್ಲಿ ವೈರಲ್ ಸೋಂಕನ್ನು ತಪ್ಪಿಸಲು ಈ ಸೂಪರ್‌ಫುಡ್‌ಗಳನ್ನು ಆಹಾರದಲ್ಲಿ ಸೇರಿಸಿ

ಶೀತ ಮತ್ತು ಕೆಮ್ಮಿನ ಸಮಯದಲ್ಲಿ ಪೇರಲವನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ನೀವು ಭಾವಿಸುತ್ತೀರಾ?

Continue Reading ಶೀತ ಮತ್ತು ಕೆಮ್ಮಿನ ಸಮಯದಲ್ಲಿ ಪೇರಲವನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ನೀವು ಭಾವಿಸುತ್ತೀರಾ?

ಬಿಸಿ ಮತ್ತು ಬಿಸಿಯಾದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ, ಒಮ್ಮೆ ಅದರಿಂದ ಉಂಟಾಗುವ ಹಾನಿಯನ್ನು ತಿಳಿಯಿರಿ

Continue Reading ಬಿಸಿ ಮತ್ತು ಬಿಸಿಯಾದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ, ಒಮ್ಮೆ ಅದರಿಂದ ಉಂಟಾಗುವ ಹಾನಿಯನ್ನು ತಿಳಿಯಿರಿ

Leave a Comment

error: Content is protected !!