Mangalore Marwai/Clams Sukka in Kannada ಮರ್ವೈ ಸುಕ್ಕ

Mangalore Marwai/Clams Sukka in Kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಮರ್ವೈ ಸುಕ್ಕ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Mangalore Marwai/Clams Sukka in Kannada ಮರ್ವೈ ಸುಕ್ಕ

Mangalore Marwai/Clams Sukka in Kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಮರ್ವೈ ಒಂದು ಕೆಜಿ
  • ತುರಿದ ತೆಂಗಿನಕಾಯಿ
  • ಈರುಳ್ಳಿ
  • ಬೆಳ್ಳುಳ್ಳಿ
  • ಅರಶಿನ ಪುಡಿ
  • ಮೆಂತೆ
  • ಜೀರಿಗೆ
  • ಕೊತ್ತಂಬರಿ ಬೀಜ
  • ಕರಿಮೆಣಸು
  • ಬ್ಯಾಡಗಿ ಮೆಣಸಿನಕಾಯಿ
  • ಸಾಸಿವೆ
  • ಬೇವಿನ ಸೊಪ್ಪು
  • ಹುಣಸೆ ಹುಳಿ
  • ಉಪ್ಪು
  • ತೆಂಗಿನ ಎಣ್ಣೆ

Amazon Grocery Store

ಮರ್ವೈ ಸುಕ್ಕ ಮಾಡುವ ವಿಧಾನ

  • ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ತೆಂಗಿನಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಬ್ಯಾಡಗಿ ಮೆಣಸಿನಕಾಯಿಯನ್ನೂ ಹಾಕಿ, ನಂತರ ಮೆಂತೆಯನ್ನು ಹಾಕಿ, ಸಾಸಿವೆಯನ್ನು ಹಾಕಿ, ಕರಿಮೆಣಸು, ಜೀರಿಗೆ, ಕೊತ್ತಂಬರಿಬೀಜವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗಾ ಅಡುಗೆ ಮನೆಯಲ್ಲಿ ಮಸಾಲೆ ಪರಿಮಳ ಬರ್ತಾ ಇದೆ. ಹಾಗೇ ಬಂದಾಗ ಸ್ಟವ್ ಆಫ್ ಮಾಡಿ, ಬಾಣಲೆಯನ್ನು ಸ್ಟವ್ ನಿಂದಾ ತೆಗೆಯಿರಿ. ಬಿಸಿ ಆರಲು ಬಿಡಿ.
  • ಈಗಾ ಮಿಕ್ಸ್ ಜಾರ್ ತಗೊಂಡು ಬಾಣಲೆಯ ಮಸಾಲೆಯನ್ನು ಮಿಕ್ಸ್ ಜಾರ್ನಲ್ಲಿ ಪುಡಿ ಮಾಡಿ. ನಂತರ ಹುಣಸೆ ಹುಳಿ ಹಾಕಿ ಇನ್ನೊಮ್ಮೆ ಪುಡಿ ಮಾಡಿ.
  • ಈಗಾ ತುರಿದ ತೆಂಗಿನಕಾಯಿಯನ್ನೂ ಒಂದು ಪಾತ್ರೆಗೆ ಹಾಕಿ, ಹಾಗೇ ಪುಡಿ ಮಾಡಿ ಇಟ್ಟ ಮಸಾಲೆಯನ್ನು ಕೂಡ ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಈಗಾ ಒಗ್ಗರಣೆಗೆ ತಯಾರಿ ಮಾಡುವ ಅದಕ್ಕಾಗಿ ತೆಂಗಿನ ಎಣ್ಣೆ ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಬೇಕು. ಸಾಸಿವೆ ಬಾಣಲೆಯಲ್ಲಿ ಹುಡಿಯುವಾಗ ಬೆಳ್ಳುಳ್ಳಿಯನ್ನೂ ಸೇರಿಸಿ, ಬೇವಿನ ಸೊಪ್ಪು, ಹಚ್ಚಿದ ಈರುಳ್ಳಿ ಯನ್ನೂ ಹಾಕಿ ಒಂದು ಸೌಟಲ್ಲಿ ಮಿಕ್ಸ್ ಮಾಡಿಕೊಳ್ಳಿ, ಈಗಾ ಈರುಳ್ಳಿ ಕಂದು ಬಣ್ಣಕ್ಕೆ ತಿರುಗಬೇಕು ಅದಕ್ಕಾಗಿ ಸ್ಪಲ್ಪ ಉಪ್ಪನ್ನು ಸೇರಿಸಿ (ಉಪ್ಪು ರುಚಿಗೆ ತಕ್ಕಷ್ಟು), ನಂತರ ಅರಶಿನ ಪುಡಿ ಸೇರಿಸಿ, ನಂತರ ಮರ್ವಯಿಯನ್ನು ಈ ಎಲ್ಲ ಮಸಾಲೆಯ ಮಿಶ್ರಣಕ್ಕೇ ಹಾಕಿ. ಸ್ವಲ್ಪ ನೀರನ್ನು ಸೇರಿಸಿ ಮುಂದೆ ಮರ್ವಯಿಯನ್ನು ಹದವಾಗಿ ಬೇಯಿಸಿ. ಐದು ನಿಮಿಷಗಳ ಬಳಿಕ ಮರ್ವಯಿ ಬೆಂದಿದೆಯ ಎಂದು ಮುಚ್ಚಳ ತೆಗೆದು ನೋಡಿ.
  • ನಂತರ ಇದಕ್ಕೆ ನಾವು ಆಗ ತಯಾರಿಸಿದ ಮಸಾಲೆ ಮಿಶ್ರಣವನ್ನು ಇದಕ್ಕೆ ಸೇರಿಸಿ. ಇನ್ನೊಮ್ಮೆ ಸೌಟನಿಂದಾ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಬೇಕಾದಲ್ಲಿ ಒಂದು ನಿಮಷ ಹಬೆಯಲ್ಲಿ ಇರಲಿ. ಈಗಾ ರುಚಿ ರುಚಿಯಾದ ಮಂಗಳೂರಿನ ಮರ್ವೈ ಸುಕ್ಕ ಸವಿಯಲು ಸಿದ್ಧವಾಗಿದೆ.
  • ಇದನ್ನೂ ಊಟದ ಜೊತೆಗೆ ಸವಿಯುವುದಕ್ಕೆ ಬಲು ರುಚಿ.

Mutton stock Biryani in Kannada ಮಟನ್ ಬಿರಿಯಾನಿ ರೆಸಿಪಿ

ಸೂಪರ್‌ಫುಡ್‌ಗಳು: ಚಳಿಗಾಲದಲ್ಲಿ ವೈರಲ್ ಸೋಂಕನ್ನು ತಪ್ಪಿಸಲು ಈ ಸೂಪರ್‌ಫುಡ್‌ಗಳನ್ನು ಆಹಾರದಲ್ಲಿ ಸೇರಿಸಿ

Continue Reading ಸೂಪರ್‌ಫುಡ್‌ಗಳು: ಚಳಿಗಾಲದಲ್ಲಿ ವೈರಲ್ ಸೋಂಕನ್ನು ತಪ್ಪಿಸಲು ಈ ಸೂಪರ್‌ಫುಡ್‌ಗಳನ್ನು ಆಹಾರದಲ್ಲಿ ಸೇರಿಸಿ

ಶೀತ ಮತ್ತು ಕೆಮ್ಮಿನ ಸಮಯದಲ್ಲಿ ಪೇರಲವನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ನೀವು ಭಾವಿಸುತ್ತೀರಾ?

Continue Reading ಶೀತ ಮತ್ತು ಕೆಮ್ಮಿನ ಸಮಯದಲ್ಲಿ ಪೇರಲವನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ನೀವು ಭಾವಿಸುತ್ತೀರಾ?

ಬಿಸಿ ಮತ್ತು ಬಿಸಿಯಾದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ, ಒಮ್ಮೆ ಅದರಿಂದ ಉಂಟಾಗುವ ಹಾನಿಯನ್ನು ತಿಳಿಯಿರಿ

Continue Reading ಬಿಸಿ ಮತ್ತು ಬಿಸಿಯಾದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ, ಒಮ್ಮೆ ಅದರಿಂದ ಉಂಟಾಗುವ ಹಾನಿಯನ್ನು ತಿಳಿಯಿರಿ

Summary
recipe image
Review Date
Reviewed Item
Mangalore Marwai/Clams Sukka in Kannada ಮರ್ವೈ ಸುಕ್ಕ
Author Rating
51star1star1star1star1star
Recipe Name
Mangalore Marwai/Clams Sukka in Kannada ಮರ್ವೈ ಸುಕ್ಕ

Leave a Comment

error: Content is protected !!