Maruvai fish basale mangalore style Recipe : ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಬಸಲೆ ಮರುವೈ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Maruvai fish basale mangalore style Recipe ಮಾಡಲು ಬೇಕಾಗುವ ಸಾಮಗ್ರಿಗಳು
- ಬಸಲೆ ಒಂದು ಕಟ್ಟು
- Maruvai fish ಮೀನು ಅರ್ದ ಕೆಜಿ
- ಆರರಿಂದ ಎಂಟು ಬ್ಯಾಡಗಿ ಮೆಣಸಿನಕಾಯಿ
- ಒಂದುವರೆ ಚಿಕ್ಕ ಚಮಚ ದಷ್ಟು ಮೆಂತೆ
- ಒಂದುವರೆ ಚಿಕ್ಕ ಚಮಚ ದಷ್ಟು ಸಾಸಿವೆ Musturd Seed
- ಕರಿಮೆಣಸು ಒಂದುವರೆ ಚಿಕ್ಕ ಚಮಚ ದಷ್ಟು Black pepper corns
- ಕೊತ್ತಂಬರಿ ಬೀಜ ಒಂದುವರೆ ಚಿಕ್ಕ ಚಮಚ ದಷ್ಟು Coriander seed
- ಒಂದುವರೆ ಚಿಕ್ಕ ಚಮಚ ದಷ್ಟು ಜಿರಿಗೆ Cumin seeds
- ಎರಡೂ ಎಸುಳು ಬೆಳ್ಳುಳ್ಳಿ
- ಹುಣಸೆ ಹುಳಿ Tamarind ಸ್ವಲ್ಪ
- ಅರಶಿನ ಪುಡಿ Tarmaric powder
- ಉಪ್ಪು ರುಚಿಗೆ ತಕ್ಕಷ್ಟು
- ಒಂದು ತೆಂಗಿನ ಕಾಯಿ ತುರಿದ
- ತೆಂಗಿನ ಎಣ್ಣೆ
Amazon Grocery Store Visit ಮಾಡಿ
ಬಸಲೆ ಮರುವೈ ರೆಸಿಪಿ ಮಾಡುವ ವಿಧಾನ


- ಬಸಲೆಯನ್ನು ಬೇಯಿಸುವ ಅದಕ್ಕೆ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಿ.ಬಾಣಲೆ ಬಿಸಿ ಆದಾಗ ಸ್ವಲ್ಪ ತೆಂಗಿನ ಎಣ್ಣೆ ಹಾಕಿ. ಎಣ್ಣೆ ಕಾಯುತ್ತಾ ಬರುವಾಗ ಬ್ಯಾಡಗಿ ಮೆಣಸಿನಕಾಯಿ ಹಾಕಿ ಸ್ವಲ್ಪ ಹೊತ್ತು ಮಗುಚಿ. ನಂತರ ನಮ್ಮಲ್ಲಿ ಇರುವ ಮಸಾಲೆ ಒಂದೊಂದಾಗಿ ಸೇರಿಸುವ ಮೊದಲು ಮೆಂತೆ,ಸಾಸಿವೆ, ಕರಿಮೆಣಸು,ಕೊತ್ತಂಬರಿ,ಜೀರಿಗೆ ನಂತರ ಬೆಳ್ಳುಳ್ಳಿ ಹಾಕಿ ಮಗುಚಿ. ಈಗ ಮಸಾಲೆ ಪರಿಮಳ ಅಡುಗೆ ಮನೆಯಲ್ಲಿ ಬರುವಾಗ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಿ.
- ಈಗ ಮಸಾಲೆಯನ್ನು ರುಬ್ಬಿಕೊಳ್ಳಿ ಅದಕ್ಕೆ ಮಿಕ್ಸಿ ಜಾರ್ ತಗೊಂಡು ಬಿಸಿ ಆರಲು ಬಿಟ್ಟ ಮಸಾಲೆಯನ್ನು ಹಾಕುತ್ತ ಹೋಗಿ. ನಂತರ ಅದಕ್ಕೆ ಹುಣಸೆ ಹುಳಿ ಸ್ವಲ್ಪ ಬಿಡಿಸಿ ಹಾಕಿ.ಹಾಗೇ ತುರಿದ ತೆಂಗಿನಕಾಯಿ ನಂತರ ಬೇಕಾದಷ್ಟು ನೀರನ್ನೂ ಹಾಕಿ. ಮೇಲಿನ ಚಿತ್ರದಲ್ಲಿ ತೋರಿಸಿದ ಹಾಗೇ ಚೆನ್ನಾಗಿ ರುಬ್ಬಿಕೊಳ್ಳಿ.
- ಈಗ ಬಸಲೆಯನ್ನು ಬೇಯಿಸುವ ಅದಕ್ಕೇ ಒಂದು ಪಾತ್ರೆಯಲ್ಲಿ ಬಸಲೆ ದಂಡನ್ನು ತೆಗೆದುಕೊಳ್ಳಿ, ಸ್ವಲ್ಪ ನೀರನ್ನೂ ಹಾಕಿ ಕೊಳ್ಳಿ ಅದರ ಮೇಲೆ ಬಸಲೆ ಸೊಪ್ಪು ಅನ್ನೂ ಹಾಕಿ, ಆದರ ಮೇಲೆ ಅರಶಿನ ಪುಡಿ ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಸವರಿ, ನಂತರ ಬಸಲೆ ಸೊಪ್ಪು ನ ಮೇಲೆ ಮರುವೈ ಅನ್ನು ಹಾಕಿ.ನಂತರ ಮುಚ್ಚಳ ಹಾಕಿ ಹದ ಬೆಂಕಿಯಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬೇಯಿಸಿ.
- ಸುಮಾರು ಹದಿನೈದು ನಿಮಿಷಗಳ ನಂತರ ಸ್ವಲ್ಪ ಹಿಂದೆ ಆರೆಡಿರುವ ಮಸಾಲೆ ನಮ್ಮ ಮಿಕ್ಸಿ ಬ್ಲಂಡರ್ ಜಾರ್ ಅಲ್ಲಿ ಇದೆ. ಅದನ್ನು ಮರುವೈ ಮೇಲೆ ಸುರಿಯಿರಿ. ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಅರೇಡಿರುವ ಜಾರ್ ಅಲ್ಲಿಯೇ ಸ್ವಲ್ಪ ನೀರನ್ನೂ ಬೆರೆಸಿ ಹಾಕಿ. ನಂತರ ಸೌಟ್ ನಿಂದಾ ಮಗುಚಿ.ರುಚಿ ನೋಡಿ ಅಗತ್ಯ ಇದ್ದರೆ ಉಪ್ಪು ಬೆರೆಸಿ. ನಂತರ ಮಿಕ್ಸ್ ಮಾಡಿ.ಈಗ ಮಸಾಲೆ ಕುದಿಯಲು ಪ್ರಾರಂಭಿಸಿದಾಗ ಸ್ಟೌವ್ ಆಫ್ ಮಾಡಿ.
- ಇದೀಗ ರುಚಿಯಾದ Maruvai fish basale mangalore style Recipe ಸವಿಯಲು ಸಿದ್ಧವಾಗಿದೆ.