Mixed Palak Vegetable Recipes Indian ಪಾಲಕ್ ರೆಸಿಪಿ ಕನ್ನಡ

Mixed Palak Vegetable Recipes Indian: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಪಾಲಕ್ ಸೊಪ್ಪು ಹಾಗೂ ಎಲ್ಲಾ ತರಕಾರಿ ಮಿಶ್ರಣದಿಂದ ಮಾಡುವ ರೆಸಿಪಿ ಅನೂ ತಿಳಿದುಕೊಳ್ಳೊಣ.

ಪಾಲಕ್ ರೆಸಿಪಿ

Mixed Palak Vegetable Recipes Indian ಮಾಡಲು ಬೇಕಾಗುವ ಸಾಮಗ್ರಿಗಳು

  • Spinach ಪಾಲಕ್ ಸೊಪ್ಪು ಎರಡು ಕಟ್ಟು ಅಷ್ಟು 382g
  • ಎರಡೂ ಕ್ಯಾರಟ್ ಹದವಾಗಿ ತುಂಡು ಮಾಡಿದ 193g
  • ಹತ್ತರಿಂದ ಹದಿನೈದು ಬೀನ್ಸ್ beans ಚಿಕ್ಕದಾಗಿ ಕತ್ತರಿಸಿ ಇಟ್ಟ 197g
  • ಎರಡು ದೊಣ್ಣೆ ಮೆಣಸಿನಕಾಯಿ ಚೌಕವಾಗಿ ಹಚ್ಚಿ ಇಟ್ಟುಕೊಂಡ 227g
  • ಎರಡು ಬಟಾಟೆ Potatoes ಹದವಾಗಿ ತುಂಡು ಮಾಡಿ ಇಟ್ಟ 197g
  • ನೂರು ಗ್ರಾಂ ಅಷ್ಟು ಬಟಾಣಿ Green Peas
  • ಮೂರು ಈರುಳ್ಳಿ ಚಿಕ್ಕದಾಗಿ ಹಚ್ಚಿದ Onion 221g
  • ಒಂದರಿಂದ ಎರಡು ಟೊಮ್ಯಾಟೋ ಒಟ್ಟಾರೆಯಾಗಿ ಹಚ್ಚಿ ಇಟ್ಟುಕೊಂಡ 187g
  • ಕಾಲು ಕಟ್ಟ್ ಅಷ್ಟು ಕೊತ್ತಂಬರಿ ಸೊಪ್ಪು Cilantro 32g
  • ಹದಿನಾಲ್ಕು ಕಾಯಿ ಮೆಣಸು Green Chilies 75g
  • ಎರಡೂ ದೊಡ್ಡ ಚಮಚ ದಷ್ಟು ಮನೆಯಲ್ಲಿ ಅರೆದಿರವ ಶುಂಠಿ ಬೆಳ್ಳುಳ್ಳಿ ಪೇಸ್ಟ್ Ginger Garlic Paste 48g
  • ಒಂದು ಚಿಕ್ಕ ಚಮಚ ದಷ್ಟು ಅರಶಿನ ಪುಡಿ 4g
  • ಒಂದು ಚಿಕ್ಕ ಚಮಚ ದಷ್ಟು ಮನೆಯಲ್ಲಿ ಪುಡಿ ಮಾಡಿದ ಗರಂ ಮಸಾಲ ಪುಡಿ 4g
  • ಒಂದು ಚಿಕ್ಕ ಚಮಚ ದಷ್ಟು ಕಸೂರಿ ಮೆತಿ 2g
  • ಉಪ್ಪು ರುಚಿಗೆ ತಕ್ಕಷ್ಟು
  • Sunflower oil 41g

Amazon Grocery Store Visit

ಪಾಲಕ್ ಸೊಪ್ಪು ಹಾಗೂ ಎಲ್ಲಾ ತರಕಾರಿ ಮಿಶ್ರಣದಿಂದ ರೆಸಿಪಿ ತಯಾರಿಸುವುದು ಹೇಗೆ ?

  • ಮೊದಲು ಪಾಲಕ್ ಸೊಪ್ಪು ಅನ್ನೂ ಬಿಸಿ ನೀರಲ್ಲಿ ಸ್ವಲ್ಪ ಹೊತ್ತು ಬೇಯಿಸುವ ಅದಕ್ಕೇ ಒಂದು ಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟು ಅದಕ್ಕೇ ಪಾಲಕ್ ಸೊಪ್ಪು ಹಾಗೂ ನೀರನ್ನು ಸೇರಿಸಿ ಸ್ಟೌವ್ ಆನ್ ಮಾಡಿ ಬೇಯಿಸಿ, ಸ್ವಲ್ಪ ಪಾಲಕ್ ಸೊಪ್ಪು ಮೆದು ಅದ ತಕ್ಷಣ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಿ.
  • ಬಿಸಿ ಆರಿದ ನಂತರ ಪಾಲಕ್ ಸೊಪ್ಪು ಅನ್ನೂ ಮಿಕ್ಸಿ ಬ್ಲಂಡರ್ ಜಾರ್ ಅಲ್ಲಿ ರುಬ್ಬಿ ಕೊಳ್ಳುವ , ಅದಕ್ಕೇ ಮಿಕ್ಸಿ ಬ್ಲಂಡರ್ ತಗೊಂಡು ಪಾಲಕ್ ಸೊಪ್ಪನ್ನು ಸೇರಿಸಿ, ನಂತರ ಅದಕ್ಕೆ ಕಾಯಿ ಮೆಣಸು ಹಾಗೂ ಟೊಮ್ಯಾಟೋ ಅನ್ನೂ ಹಾಕಿ, ಹಾಗೇಯೆ ಕೊತ್ತಂಬರಿ ಸೊಪ್ಪು ಹಾಕಿ,ನಂತರ ಬೇಕಾದಷ್ಟು ನೀರನ್ನೂ ಹಾಕಿ ಮಿಕ್ಸಿ ಚಾಲೂ ಮಾಡಿ. ಸಣ್ಣವಾಗಿ ರುಬ್ಬಿಕೊಳ್ಳಿ.
  • ಈಗ ಪದಾರ್ಥ ತಯಾರು ಮಾಡಲು ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಿ. ಬಾಣಲೆ ಬಿಸಿ ಆದಾಗ ಎಣ್ಣೆಯನ್ನು ಹಾಕಿ, ಎಣ್ಣೆ ಬಿಸಿಯಾದಾಗ ಚಿಕ್ಕದಾಗಿ ಹಚ್ಚಿದ ಈರುಳ್ಳಿಯನ್ನು ಹಾಕಿ, ಈರುಳ್ಳಿ ಸ್ವಲ್ಪ ಬೇಗ ಬಾಡಲು ಸ್ವಲ್ಪ ಉಪ್ಪನ್ನು ಬೆರೆಸಿ ಸೌಟ್ ನಿಂದಾ ಮಗುಚಿ. ಈರುಳ್ಳಿ ಬಾಡಿದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಪೆಸ್ಟ್ ನ ಹಸಿ ವಾಸನೆ ಪರಿಮಳ ಹೋಗುವ ವರೆಗೆ ಮಗುಚಿ. ನಂತರ ಅರಶಿನ ಪುಡಿ ಸೇರಿಸಿ, ಅದೇ ರೀತಿ ರಾತ್ರಿ ಎಲ್ಲಾ ನೆನೆಸಿ ಇತ್ತಾಂತಹ ಬಟಾಣಿಯ ನೀರನ್ನೂ ತೆಗೆದು ಬಟಾಣಿಯನ್ನು ಮಾತ್ರ ಹಾಕಿ. ಬಟಾಣಿ ಬೇಯಲು ಎರಡು ನಿಮಿಷ ಆದರೂ ಬೇಕಾಗುತ್ತದೆ. ಅದಕ್ಕೆ ಸೌಟ್ ನಿಂದಾ ಮಗುಚಿ. ನಂತರ ಹದ ತುಂಡು ಮಾಡಿದ ಕ್ಯಾರಟ್ ಅನ್ನು ಹಾಕಿ ಮಗುಚಿ. ಅದೇ ರೀತಿ ಹದ ತುಂಡು ಮಾಡಿದ ಬಟಾಟೆಯನ್ನು ಹಾಕಿ ಸ್ವಲ್ಪ ಹೊತ್ತು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮಿಕ್ಸ್ ಮಾಡಿಕೊಳ್ಳಿ.ಮುಂದೆ ನೀವೂ ಸ್ವಲ್ಪ ಹೊತ್ತು ಮುಂಚೆ ಮಿಕ್ಸಿ ಬ್ಲಂಡರ್ ಜಾರ್ ಅಲ್ಲಿ ರುಬ್ಬಿರುವ ಪಾಲಕ್ ಮಸಾಲೆ ಅನ್ನು ಸೇರಿಸಿ. ಅದರ ಜೊತೆಗೆ ಮಿಕ್ಸ್ ಮಾಡಿ ನಂತರ ಮಿಕ್ಸಿ ಜಾರಿಗೆ ಸ್ವಲ್ಪ ನೀರನ್ನೂ ಸೇರಿಸಿ ಬಾಣಲೆಗೆ ಹಾಕಿ. ನಂತರ ಗರಂ ಮಸಾಲೆ ಪುಡಿ, ಕಸೂರಿ ಮೆತಿಯನ್ನು ಹಾಗೇ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿ. ನಂತರ ತರಕಾರಿ ಹಸಿ ಎಲ್ಲವೂ ಸಂಪೂರ್ಣವಾಗಿ ಬೇಯುವ ವರೆಗೆ ಮುಚ್ಚಳ ಹಾಕಿ ಹದ ಬೆಂಕಿಯಲ್ಲಿ ಬೇಯಿಸಿ. ನಂತರ ಮುಚ್ಚಳ ತೆಗೆದು ನೋಡಿದರೆ ತರಕಾರಿ ಬೆಂದಿರುತದೆ.
  • ಈಗ ಪಾಲಕ್ ಸೊಪ್ಪು ಹಾಗೂ ಎಲ್ಲಾ ತರಕಾರಿ ಮಿಶ್ರಣದ ರೆಸಿಪಿ ತಯಾರಾಗಿದೆ. ಇದರಲ್ಲಿ ನೂರು ಗ್ರಾಂ ಗೆ 120.3ಕಿಲೋ ದಷ್ಟು ಕ್ಯಾಲರಿ ಇದೆ.

Akki Kadubu recipe in kannada ಅಕ್ಕಿ ಕಡುಬು ರೆಸಿಪಿ

ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Continue Reading ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

Continue Reading ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

Continue Reading ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

Continue Reading ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Continue Reading ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Summary
recipe image
Review Date
Reviewed Item
Mixed Palak Vegetable Recipes Indian ಪಾಲಕ್ ರೆಸಿಪಿ ಕನ್ನಡ
Author Rating
51star1star1star1star1star
Recipe Name
Mixed Palak Vegetable Recipes Indian ಪಾಲಕ್ ರೆಸಿಪಿ ಕನ್ನಡ

Leave a Comment

x
error: Content is protected !!