Mushroom sukka mangalorean style: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಮಶ್ರೂಮ್ ಸುಕ್ಕ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Mushroom sukka mangalorean style ಮಾಡಲು ಬೇಕಾಗುವ ಸಾಮಗ್ರಿಗಳು
- Mushroom ಅಣಬೆ ನಾಲ್ಕೂ ಪ್ಯಾಕೆಟ್ 774g
- ಒಂದು ಚಿಕ್ಕ ಚಮಚ ದಷ್ಟು ಅರಶಿನ ಪುಡಿ Turmeric powder 4g
- ಒಂದು ಚಿಕ್ಕ ಚಮಚ ದಷ್ಟು ಸಾಸಿವೆ Musturd seed 4g
- ಕಾಲು ಚಿಕ್ಕ ಚಮಚ ದಷ್ಟು ಮೆಂತೆ Fenugreek seeds 1g
- ಒಂದು ಚಿಕ್ಕ ಚಮಚ ದಷ್ಟು ಜೀರಿಗೆ Cumin seeds 3g
- ಒಂದು ಚಿಕ್ಕ ಚಮಚ ದಷ್ಟು ಕೊತ್ತಂಬರಿ ಬೀಜ Coriander seed 5g
- ಒಂದು ಚಿಕ್ಕ ಚಮಚ ದಷ್ಟು ಕರಿ ಮೆಣಸು Black pepper corns 3g
- ಇಪ್ಪತ್ತು ಬ್ಯಾಡಗಿ ಮೆಣಸಿನಕಾಯಿ 38g
- ಒಂದು ದೊಡ್ಡ ಚಮಚ ದಷ್ಟು ಕರಿ ಬೇವಿನ ಸೊಪ್ಪು Curry Leaves 4g
- ಅರ್ದ ಬೆಳ್ಳುಳ್ಳಿ Garlic 21g
- ಮೂರು ಈರುಳ್ಳಿ ಚಿಕ್ಕದಾಗಿ ಹಚ್ಚಿದ 280g
- ಎರಡೂ ಟೊಮೇಟೊ 185g
- ಒಂದು ತೆಂಗಿನಕಾಯಿ ತುರಿದ 125g
- ಉಪ್ಪು ರುಚಿಗೆ ತಕ್ಕಷ್ಟು
- ತೆಂಗಿನ ಎಣ್ಣೆ 66g
ಮಶ್ರೂಮ್ ಸುಕ್ಕ ಮಾಡುವ ವಿಧಾನ
- ಒಂದು ಬಾಣಲೆಯನ್ನೂ ಸ್ಟೌವ್ ಮೇಲಿಡಿ.ಸ್ಟೌವ್ ಆನ್ ಮಾಡಿ, ಬ್ಯಾಡಗಿ ಮೆಣಸಿನಕಾಯಿ ಹಾಕಿ, ಸೌಟ್ ನಿಂದಾಮಿಕ್ಸ್ ಮಾಡಿ, ನಂತರ ಕರಿಮೆಣಸು ಹಾಗೂ ಮೆಂತೆಯನ್ನು ಹಾಕಿ ಮಿಕ್ಸ್ ಮಾಡಿ.ಹಾಗೆಯೇ ಕೊತ್ತಂಬರಿ ಬೀಜ, ನಂತರ ಜೀರಿಗೆ ಹಾಕಿ ಸೌಟ್ ನಿಂದಾ ಮಿಕ್ಸ್ ಮಾಡಿ. ಮಸಾಲೆ ಪರಿಮಳ ಅಡುಗೆ ಮನೆಯಲ್ಲಿ ಬರುವಾಗ ಸ್ಟೌವ್ ಆಫ್ ಮಾಡಿ.
- ನಂತರ ಒಂದು ಮಿಕ್ಸಿ ಬ್ಲಂಡರ್ ಜಾರ್ ತಗೊಂಡು ಬಾಣಲೆಯಲ್ಲಿ ಇರುವ ಮಸಾಲೆಯನ್ನು ಹಾಕಿ. ಸ್ವಲ್ಪವೂ ನೀರನ್ನೂ ಬೆರೆಸದೆ ಮಿಕ್ಸಿ ಚಾಲೂ ಮಾಡಿ. ಸಣ್ಣವಾಗಿ ಪುಡಿ ಮಾಡಿಕೊಳ್ಳಿ.
- ಈಗ ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಅದನ್ನು ಸ್ಟವ್ ಮೇಲೆ ಇಡಿ. ನಂತರ ಸ್ವಲ್ಪ ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ತುರಿದತೆಂಗಿನಕಾಯಿಯನ್ನು ಹಾಕಿ ಅದೂ ಕಡು ಕಂದು ಬಣ್ಣ ಬರುವವರೆಗೆ ಸೌಟ್ ಅಲ್ಲಿ ಮಗುಚಿ. ನಂತರ ಸ್ಟೌವ್ ಆಫ್ ಮಾಡಿ. ಹಾಗೇ ಬಾಣಲಿಯಲ್ಲಿ ಬಿಡಿ.
- ನಂತರ ಒಂದು ದೊಡ್ಡ ಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟು ಆನ್ ಮಾಡಿ. ಸ್ವಲ್ಪ ಎಣ್ಣೆಯನ್ನೂ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಿ, ಸಾಸಿವೆ ಹು ಡಿಯುವಾಗ ಬೆಳ್ಳುಳ್ಳಿ , ಕರಿಬೇವಿನ ಸೊಪ್ಪು, ಹಾಕಿ, ನಂತರ ಚಿಕ್ಕದಾಗಿ ಹಚ್ಚಿದ ಈರುಳ್ಳಿಯನ್ನು ಹಾಕಿ, ಈರುಳ್ಳಿ ಬೇಗ ಕಂದು ಬಣ್ಣಕ್ಕೆ ತಿರುಗಲು ಒಂದು ಗಿಸಲು ಚಮಚದಷ್ಟು ಉಪ್ಪನ್ನು ಬೆರೆಸಿ ಮಿಕ್ಸ್ ಮಾಡಿ. ಹಾಗೇ ಅರಶಿನ ಪುಡಿ, ನಂತರ ಚಿಕ್ಕದಾಗಿ ಹಚ್ಚಿದ ಟೊಮೇಟೊವನ್ನ ಹಾಕಿ,ನಂತರ ಮಿಕ್ಸಿ ಬ್ಲಂಡರ್ ಜಾರ್ ಅಲ್ಲಿ ಇರುವ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಹಾಗೇ ಒಂದು ಚಿಕ್ಕ ಗಿಸಲೂ ಚಮಚ ದಷ್ಟು ಉಪ್ಪು ಬೆರೆಸಿ ಮಗುಚಿ. ನಂತರ ಎರಡು ಭಾಗ ಮಾಡಿ ಇಟ್ಟ ಮಶ್ರೂಮ್ ಅನ್ನೂ ಹಾಕಿ. ಅದೇ ರೀತಿ ಅರ್ದ ಚಿಕ್ಕ ಚಮಚ ದಷ್ಟು ಉಪ್ಪು ಬೆರೆಸಿ. ಈ ಅಡುಗೆಯಲ್ಲಿ ಸ್ವಲ್ಪವೂ ನೀರನ್ನೂ ಹಾಕಬೇಡಿ. ಏಕೆಂದರೆ ಮಶ್ರೂಮ್ ಬೇಯುವಾಗ ನೀರನ್ನೂ ಬಿಡುತ್ತದೆ. ಈಗ ಮುಚ್ಚಳ ಹಾಕಿ ಐದು ನಿಮಿಷಗಳ ಕಾಲ ಬೇಯಿಸಿ. ಐದು ನಿಮಿಷಗಳ ನಂತರ ಬಾಣಲೆಯಲ್ಲಿ ಇರುವ ತುರಿದ ತೆಂಗಿನಕಾಯಿ ಯನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ಈಗ ಮಶ್ರೂಮ್ ಸುಕ್ಕ ಸವಿಯಲು ಸಿದ್ಧವಾಗಿದೆ. ಇದನ್ನೂ ನೀವೂ ಮನೆಯಲ್ಲಿ ಮಾಡಿ. ಹೇಗಿದೆ ಎಂದು ನಮಗೆ ತಿಳಿಸಿ.ಇದರಲ್ಲಿ ನೂರು ಗ್ರಾಂ ಗೆ ಸುಮಾರು 144.9ಕಿಲೋ ದಷ್ಟು ಕ್ಯಾಲರಿ ಇದೆ.