Rava Ladoo Recipe in Kannada ರವೆ ಲಾಡು ಕನ್ನಡ ರೆಸಿಪಿ

Rava Ladoo Recipe in Kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ರವೆ ಲಾಡು ಕನ್ನಡದಲ್ಲಿ ರೆಸಿಪಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ರವೆ ಲಾಡು ಕನ್ನಡ ರೆಸಿಪಿ

Rava Ladoo Recipe in Kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಬಾಂಬೆ ರವೆ Boambe rava 275g
  • ಅರ್ದ ಗಡಿ ತೆಂಗಿನ ಕಾಯಿ ತುರಿದ -80g
  • ರವೆಯಸ್ಟೆ ಸಕ್ಕರೆ Sugar –
  • ಒಂದು ದೊಡ್ಡ ಚಮಚದಷ್ಟು ಬಾದಾಮಿ Almonds -16g
  • ಒಂದು ದೊಡ್ಡ ಚಮಚದಷ್ಟು ಗೇರು ಬೀಜ Cashewnuts -12g
  • ಒಂದು ದೊಡ್ಡ ಚಮಚದಷ್ಟು ಒಣದ್ರಾಕ್ಷಿ Raisins-12g
  • ಒಂದು ಚಿಕ್ಕ ಚಮಚ ದಷ್ಟು ಏಲಕ್ಕಿ Green Cardamom Powder-1g
  • ಹಾಲು Milk -26g
  • Ghee ತುಪ್ಪ-47g

Amazon Grocery Store Visit

ರವೆ ಲಾಡು ಕನ್ನಡ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು

  • ಈಗ ಲಾಡು ಮಾಡಲು ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಅದನ್ನು ಸ್ಟೌವ್ ಮೇಲೆ ಇಡಿ.ಹಾಗೇ ಸ್ಟೌವ್ ಅನ್ ಮಾಡಿ ಬಾಣಲೆ ಬಿಸಿ ಆದಾಗ ಸ್ವಲ್ಪ ತುಪ್ಪವನ್ನು ಸೇರಿಸಿ.ತುಪ್ಪ ಕರಗುತ್ತಾ ಬರುವಾಗ ಪುಡಿ ಮಾಡಿ ಇಟ್ಟಂತ ಬಾದಾಮಿ ಸೇರಿಸಿ. ಹಾಗೇ ಚೆನ್ನಾಗಿ ಮಿಕ್ಸ್ ಮಾಡಿ, ಹಾಗೆಯೇ ಗೇರು ಬೀಜ ಹಾಕಿ, ಗೇರು ಬೀಜದ ಬಣ್ಣ ಬದಲಾದಾಗ ಒಣದ್ರಾಕ್ಷಿಯನ್ನು ಹಾಕಿ, ಹಾಗೇ ಚೆನ್ನಾಗಿ ಮಗುಚಿ.
  • ಈಗ ದ್ರಾಕ್ಷಿ ಉಬ್ಬಿಕೊಂಡು ಬರುವ ಮೊದಲೇ ತುರಿದಿರುವ ತೆಂಗಿನಕಾಯಿಯನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ರವೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದ್ದ ಬೆಂಕಿಗಿಂತ ಕಡಿಮೆಯಲ್ಲಿ ಇಟ್ಟು ಹಾಗೆಯೇ ಹತ್ತು ನಿಮಿಷ ಸಟ್ಟುಗದಲ್ಲಿ ಮಿಕ್ಸ್ ಮಾಡಿ.
  • ನಂತರ ನಾವು ಸಕ್ಕರೆ ಪಾಕವನ್ನು ಮಾಡಬೇಕು. ಅದಕ್ಕಾಗಿ ಇನ್ನೊಂದು ಬಾಣಲೆಯನ್ನು ತೆಗೆದುಕೊಳ್ಳಿ, ಅದನ್ನು ಸ್ಟವ್ ಮೇಲೆ ಇಡಿ. ನಂತರ ಸಕ್ಕರೆಯನ್ನು ಹಾಕಿ, ಹಾಗೇ ನೀರನ್ನೂ ಸೇರಿಸಿ,ನಂತರ ಸ್ಟೌವ್ ಆನ್ ಮಾಡಿ. ಸಕ್ಕರೆಯನ್ನು ಕರಗಲು ಬಿಡಿ.
  • ಇನ್ನೊಂದು ಸ್ಟೌವ್ ಅಲ್ಲಿರುವ ರವೆಯನ್ನು ಮಿಕ್ಸ್. ಮಾಡ್ತ ಇರಿ. ಹಾಗೇ ಸಕ್ಕರೆ ಪಾಕವನ್ನು ಕೂಡ ಕರಗಿಸಿ. ಸಕ್ಕರೆ ಪಾಕ ಕರಗಿದ ನಂತರ ಇನ್ನೊಂದು ಬಾಣಲೆಯಲ್ಲಿ ಇರುವ ರವೆಯನ್ನು ಸಕ್ಕರೆಯ ಪಾಕದ ಬಾಣಲೆಗೆ ಹಾಕಿ. ಕೂಡಲೇ ಚೆನ್ನಾಗಿ ಮಿಕ್ಸ್ ಮಾಡಿ. ಈ ಹೊತ್ತಿಗೆ ರವೆಯ ಮಿಶ್ರಣ ಬಾಣಲೆಯನ್ನು ಬಿಟ್ಟಾಗ ಏಲಕ್ಕಿಯ ಪುಡಿಯನ್ನು ಹಾಕಿ. ಏಲಕ್ಕಿ ಪುಡಿಯನ್ನು ಸ್ಟೌವ್ ಆಫ್ ಮಾಡುವ ಸ್ವಲ್ಪ ಹಿಂದೆ ಹಾಕಿ. ನಂತರ ಉಂಡೆ ಮಾಡುವ ಸ್ವಲ್ಪ ಮೊದಲು ಸ್ವಲ್ಪ ಬಿಸಿ ಆರಲು ಬಿಡಬೇಕು.
  • ಬಿಸಿ ಆರಿದ ನಂತರ ಹಾಲಿನಲ್ಲಿ ಕೈಯನ್ನು ಗ್ರೀಸ್ ಮಾಡಿಕೊಂಡು ಮಿಶ್ರಣವನ್ನು ಉಂಡೆ ಮಾಡಿ. ರವೆ ಲಾಡು ತಯಾರಾದ ನಂತರ ಒಂದು ಪ್ಲೇಟ್ ನಲ್ಲಿ ತೆಗೆದು ಇಡಿ. ಹಾಗೆಯೇ ಉಳಿದಿರುವ ರವೆಯನ್ನು ಕೂಡಾ ಮಾಡುತ್ತ ಹೋಗಿ.
  • ಈಗ ರವೆ ಲಾಡು ತಯಾರಾಗಿದೆ. ಇದರಲ್ಲಿ ನೂರು ಗ್ರಾಂ ಗೆ ಸುಮಾರು 407.8 ಕಿಲೋ ದಷ್ಟು ಕ್ಯಾಲರಿ ಇದೆ.

Kayi holige/Obbattu Recipe in Kannada ಒಬ್ಬಟ್ಟು ರೆಸಿಪಿ

Malpuri Bakery Style in Kannada ಮಲ್ಪೂರಿ ರೆಸಿಪಿ ಕನ್ನಡ

Bread Omelet wrap in Kannada ಬ್ರೆಡ್ ಆಮ್ಲೆಟ್ ರೆಸಿಪಿ

Fried Chicken Lollipop in Kannada ಚಿಕನ್ ಲಾಲಿಪಾಪ್ ರೆಸಿಪಿ

Mango Pickle Recipe in Kannada ಉಪ್ಪಿನಕಾಯಿ ಕನ್ನಡ ರೆಸಿಪಿ

ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

Continue Reading ತೂಕ ನಷ್ಟ: ಕಡಿಮೆ ಕೊಬ್ಬಿನ ಭಾರತೀಯ ಕರಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಿನ್ನಬಹುದು

ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

Continue Reading ಕ್ಯಾರೆಟ್ ಸೇವನೆಯು ದೇಹಕ್ಕೆ ಬಹಳ ಮುಖ್ಯ, ಆರೋಗ್ಯಕರ ಮೂಳೆಗಳಿಂದ ಹೊಳೆಯುವ ಚರ್ಮದವರೆಗೆ, ನೀವು ಪ್ರಯೋಜನಗಳನ್ನು ಪಡೆಯುತ್ತೀರಿ

ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

Continue Reading ನೆನೆಸಿದ ಕಪ್ಪುಬೇಳೆ ಪ್ರಯೋಜನಗಳು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಾಳುಗಳನ್ನು ತಿನ್ನುವುದರಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Continue Reading ಒತ್ತಡದಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಸರಿಯಾದ ಉತ್ತರವನ್ನು ತಿಳಿಯಿರಿ

Summary
recipe image
Review Date
Reviewed Item
Rava Ladoo Recipe in Kannada ರವೆ ಲಾಡು ಕನ್ನಡ ರೆಸಿಪಿ
Author Rating
51star1star1star1star1star
Recipe Name
Rava Ladoo Recipe in Kannada ರವೆ ಲಾಡು ಕನ್ನಡ ರೆಸಿಪಿ

Leave a Comment

x
error: Content is protected !!