Raw mango chutney recipe karnataka style ಮಾವಿನಕಾಯಿ ಚಟ್ನಿ

Raw mango chutney recipe karnataka style: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಮಾವಿನ ಕಾಯಿ ಚಟ್ನಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಮಾವಿನ ಕಾಯಿ ಚಟ್ನಿ

Raw mango chutney recipe karnataka style ಮಾಡಲು ಬೇಕಾಗುವ ಸಾಮಗ್ರಿಗಳು

  • ಅರ್ದ ಕಪ್ ಅಷ್ಟು ಮಾವಿನ ಕಾಯಿ ರವ mango
  • ಅರ್ದ ಗಡಿ ತೆಂಗಿನ ಕಾಯಿ ತುರಿದ Coconut
  • ಎರಡೂ ಎಸಳು ಬೆಳ್ಳುಳ್ಳಿ ಸಿಪ್ಪೆ ತೆಗೆದ.
  • ಕಾಲು ಇಂಚಿನಸ್ಟು ಶುಂಠಿ Ginger
  • ಅರ್ದ ಈರುಳ್ಳಿ ಚಿಕ್ಕದಾಗಿ ಹಚ್ಚಿ ಇಟ್ಟುಕೊಂಡ Onion
  • ಹನ್ನೆರಡು ಬ್ಯಾಡಗಿ ಮೆಣಸಿನಕಾಯಿ
  • ಒಂದು ದೊಡ್ಡ ಚಮಚ ದಷ್ಟು ಕರಿ ಬೇವಿನ ಸೊಪ್ಪು Curry Leaves
  • ಒಂದು ಚಿಕ್ಕ ಚಮಚ ದಷ್ಟು ಸಾಸಿವೆ Musturd seed
  • ಉಪ್ಪು ರುಚಿಗೆ ತಕ್ಕಷ್ಟು Salt
  • ಇಪ್ಪತಾರಿಂದ ಮೂವತ್ತು ml ತೆಂಗಿನ ಎಣ್ಣೆ

Amazon Grocery Store Visit

ಮಾವಿನ ಕಾಯಿ ಚಟ್ನಿ ಮಾಡುವ ವಿಧಾನ

  • ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಆನ್ ಮಾಡಿ.ಸ್ವಲ್ಪತೆಂಗಿನ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಬ್ಯಾಡಗಿ ಮೆಣಸಿನಕಾಯಿ ಹಾಕಿ ಸೌಟ್ ನಿಂದಾ ಮಗುಚಿ. ನಂತರ ಬೆಳ್ಳುಳ್ಳಿ ಸಿಪ್ಪೆ ತೆಗೆದ ಹಾಗೂ ಶುಂಠಿ ಹಚ್ಚಿ ಇಟ್ಟುಕೊಂಡದನ್ನು ಹಾಕಿ. ಅದೇ ರೀತಿ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಬಾಡಿಸಿ, ನಂತರ ಸ್ಟೌವ್ ಆಫ್ ಮಾಡಿ. ಬಿಸಿ ಆರಲು ಬಿಡಿ.
  • ಇಲ್ಲಿ ನಾವು ಮಿಕ್ಸಿ ಬ್ಲಂಡರ್ ಜಾರ್ ಬದಲು, ಅರೆಯುವ ಕಲ್ಲನ್ನು ಉಪಯೋಗಿಸುತ್ತೇವೆ, ಏಕೆಂದರೆ ಅರೆಯುವ ಕಲ್ಲಿನಲ್ಲಿ ಮಾಡಿದ ಚಟ್ನಿ ತುಂಬಾ ರುಚಿಕರವಾಗಿರುತ್ತದೆ ಅಲ್ಲದೆ, ಬೇಗ ಹಲಸುವುದು ಕಡಿಮೆ. ಈಗ ಅರೆಯುವ ಕಲ್ಲಿಗೆ ಬಾಣಲೆಯಲ್ಲಿ ಇರುವ ಮಸಾಲೆಯನ್ನು ಹಾಕಿ,ಹಾಗೆಯೇ ತುರಿದ ತೆಂಗಿನಕಾಯಿ,ಕತ್ತರಿಸಿ ಇಟ್ಟ ಮಾವಿನ ಕಾಯಿಯನ್ನು , ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಅರೆಯುವ ಕಲ್ಲಿನಿಂದ ಕಡೆಯಿರಿ. ನಂತರ ತಯಾರಾದ ಮಾವಿನ ಕಾಯಿ ಚಟ್ನಿಯನ್ನು ಒಂದು ತಟ್ಟೆಯಲ್ಲಿ ಹಾಕಿ ಇಡಿ.
  • ನಂತರ ಒಗ್ಗರನೆ ತಯಾರು ಮಾಡುವ ಅದಕ್ಕಾಗಿ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಡಿ. ಸ್ಟೌವ್ ಆನ್ ಮಾಡಿ. ನಂತರ ಅದಕ್ಕೇ ಕರಿ ಬೇವಿನ ಸೊಪ್ಪು ಹಾಕಿ ಮಿಕ್ಸ್ ಮಾಡಿ.ಕರಿ ಬೇವಿನ ಸೊಪ್ಪು ನ ನೀರಿನ ಅಂಶ ಹೋದ ನಂತರ, ಸ್ವಲ್ಪ ತೆಂಗಿನ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಿ, ಸಾಸಿವೆ ಪಟ ಪಟನೆ ಹೂಡಿಯುವಾಗ ಎರಡು ಬ್ಯಾಡಗಿ ಮೆಣಸಿನಕಾಯಿ ತುಂಡು ಮಾಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಗ್ಗರಣೆ ತಯಾರಾಗಿದೆ.
  • ಸ್ವಲ್ಪ ಹಿಂದೆ ಮಾಡಿ ಇಟ್ಟ ಮಾವಿನ ಕಾಯಿ ಚಟ್ನಿ ಗೆ ಈ ಒಗ್ಗರಣೆ ಸೇರಿಸಿ ಮಿಕ್ಸ್ ಮಾಡಿ. ಈಗ ಮಾವಿನ ಕಾಯಿ ಚಟ್ನಿ. ತಯಾರಾಗಿದೆ. ಇದನ್ನೂ ಗಂಜಿ ಊಟದ ಜೊತೆಗೆ ಸವಿದರೆ ಬಹಳ ಚೆನ್ನಾಗಿರುತ್ತದೆ.

South Indian okra Recipes ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ

ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

Continue Reading ಲವಂಗ ಚಹಾದ ಪ್ರಯೋಜನಗಳು: ಬೆಳಿಗ್ಗೆ ಒಂದು ಕಪ್ ಲವಂಗ ಚಹಾವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ

ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

Continue Reading ಚಳಿಗಾಲದಲ್ಲಿ ಬೆಲ್ಲದ ಜೊತೆಗೆ ಈ ಪದಾರ್ಥಗಳ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ

ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

Continue Reading ಪಾಲಕ್ ಜ್ಯೂಸ್ ಪ್ರಯೋಜನಗಳು: ಪಾಲಕ್ ರಸವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

Continue Reading ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಒಳ್ಳೆಯ ಕೊಬ್ಬನ್ನು ಸ್ವಾಗತಿಸುವ ಮೂಲಕ ಕೆಟ್ಟ ಕೊಬ್ಬನ್ನು ಹೊರಹಾಕಿ

ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Continue Reading ತೂಕ ನಷ್ಟ ಸಲಹೆಗಳು: 4 ಕಡಿಮೆ ಕ್ಯಾಲೋರಿ ತಿಂಡಿಗಳು, ನೀವು ಸಾಕಷ್ಟು ತಿಂದರೂ ತೂಕವನ್ನು ಹೆಚ್ಚಿಸುವುದಿಲ್ಲ

Summary
recipe image
Review Date
Reviewed Item
Raw mango chutney recipe karnataka style ಮಾವಿನಕಾಯಿ ಚಟ್ನಿ
Author Rating
51star1star1star1star1star
Recipe Name
Raw mango chutney recipe karnataka style ಮಾವಿನಕಾಯಿ ಚಟ್ನಿ

Leave a Comment

x
error: Content is protected !!