Sardine curry recipe Indian Style: ಈ ಒಂದೂ ಆರ್ಟಿಕಲ್ ನಲ್ಲಿ ನಾವು ಇಂದು ಭೂತಾಯಿ ಮೀನು ಸಾರು ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Sardine curry recipe Indian Style ಮಾಡಲು ಬೇಕಾಗುವ ಸಾಮಗ್ರಿಗಳು
- ಸರ್ಡಿನೆಸ್ ಭೂತಾಯಿ ಮೀನು Clean ಮಾಡಿದ 545g
- ಒಂದು ಗಡಿ ತೆಂಗಿನ ಕಾಯಿ ತುರಿದ 80g
- ಹನ್ನೆರಡರ ರಿಂದ ಹದಿನೈದು ಎಸಳು ಬೆಳ್ಳುಳ್ಳಿ 26g
- ಒಂದು ಇಂಚಿನಸ್ಟೂ ಶುಂಠಿ Ginger 10g
- ಒಂದು ಈರುಳ್ಳಿ ಚಿಕ್ಕದಾಗಿ ಹಚ್ಚಿದ Onion 60g
- ಐದರಿಂದ ಆರು ಕಾಯಿಮೇನಸು ಉದ್ದವಾಗಿ ಕತ್ತರಿಸಿದ Green Chilies-17g
- ಒಂದು ದೊಡ್ಡ ಚಮಚ ದಷ್ಟು ಬೇವಿನ ಸೊಪ್ಪು 3g
- ಒಂದು ಚಿಕ್ಕ ಚಮಚ ದಷ್ಟು turmaric powder ಅರಶಿನ ಪುಡಿ 3g
- ಅರ್ದ ಚಿಕ್ಕ ಚಮಚ ದಷ್ಟು ಮೆಂತೆ Fenugreek seeds 4g
- ಒಂದು ಚಿಕ್ಕ ಚಮಚ ದಷ್ಟು ಸಾಸಿವೆ Musturd seed 4g
- ಒಂದು ಚಿಕ್ಕ ಚಮಚ ದಷ್ಟು ಜೀರಿಗೆ Cumin seeds 3g
- ಮೂರೂ ಚಿಕ್ಕ ಚಮಚ ದಷ್ಟು ಕೊತ್ತಂಬರಿ ಬೀಜ Coriander seeds 13g
- ಒಂದು ಚಿಕ್ಕ ಚಮಚ ದಷ್ಟು ವಮಾ Carom seeds 3g
- ಒಂದು ಚಿಕ್ಕ ಚಮಚ ದಷ್ಟು ಕರಿ ಮೆಣಸಿನ ಪುಡಿ Black pepper corns 3g
- ಹತ್ತರಿಂದ ಹದಿನೈದು ಬ್ಯಾಡಗಿ ಮೆಣಸಿನಕಾಯಿ 15g
- ಎರಡರಿಂದ ಮೂರು ದೊಡ್ಡ ಚಮಚ ದಷ್ಟು ಹುಣಸೆ ಹುಳಿ Tamarind 48g
- ಉಪ್ಪು ರುಚಿಗೆ ತಕ್ಕಷ್ಟು
- 30ml ತೆಂಗಿನ ಎಣ್ಣೆ 25g
ಭೂತಾಯಿ ಮೀನು ಸಾರು ಮಾಡುವ ವಿಧಾನ
- ಮೊದಲು ಮಸಾಲೆ ತಯಾರು ಮಾಡುವ ಅದಕ್ಕಾಗಿ ಒಂದು ಬಾಣಲೆಯನ್ನು ತೆಗೆದುಕೊಳ್ಳಿ.ಅದಕ್ಕೆ ಎಣ್ಣೆ ಹಾಕಿ, ಸ್ಟೌವ್ ಆನ್ ಮಾಡಿ ,ಎಣ್ಣೆ ಬಿಸಿಯಾದಾಗ ಬ್ಯಾಡಗಿ ಮೆಣಸಿನಕಾಯಿ ಹಾಕಿ, ನಂತರ ಮೆಂತೆ, ಸಾಸಿವೆ, ಕೊತಂಬರಿ ಬೀಜ, ಜೀರಿಗೆ, ಕರಿ ಮೆಣಸು, ವಾಮಾ (Coram seed), ಬೆಳ್ಳುಳ್ಳಿ, ಸ್ವಲ್ಪ ಈರುಳ್ಳಿ ಹಾಕಿ ಮಿಕ್ಸ್ ಮಾಡಿ. ನಂತರ ಮಸಾಲೆ ಪರಿಮಳ ಅಡುಗೆ ಮನೆಯಲ್ಲಿ ಬರುವಾಗ ಸ್ಟೌವ್ ಆಫ್ ಮಾಡಿ ನಂತರ ಬಿಸಿ ಆರಲು ಬಿಡಿ.
- ನಂತರ ಒಂದು ಮಿಕ್ಸಿ ಬ್ಲಂಡರ್ ಜಾರ್ ತಗೊಳ್ಳಿ ಅದಕ್ಕೆ ಬಿಸಿ ಆರಲು ಬಿಟ್ಟ ಮಸಾಲೆಯನ್ನು ಹಾಕಿ, ನಂತರ ಹುಣಸೆ ಹುಳಿ ಹಾಕಿ, ತುರಿದ ತೆಂಗಿನಕಾಯಿ, ಕೊನೆಗೆ ಅರಶಿನ ಪುಡಿ ಹಾಕಿ ಬೇಕಾದಸ್ಟೆ ನೀರು ಸೇರಿಸಿ ಮಿಕ್ಸಿ ಚಾಲೂ ಮಾಡಿ ಸಣ್ಣವಾಗಿ ರುಬ್ಬಿಕೊಳ್ಳಿ.
- ನಂತರ ಮಿಕ್ಸಿ ಬ್ಲಂಡರ್ ಜಾರ್ ಅಲ್ಲಿ ಇರುವ ಮಸಾಲೆ ಅನ್ನೂ ಮಣ್ಣಿನ ಬಾಣಲೆ ,ಇಲ್ಲವೇ ನಾನ್ ಸ್ಟಿಕ್ ಬಾಣಲೆಯನ್ನು ತೆಗೆದುಕೊಳ್ಳಿ. ಅದೇ ರೀತಿ ಬ್ಲಂಡರ್ ಜಾರ್ ಅಲ್ಲಿ ಉಳಿದಿರುವ ಮಸಾಲೆಗೆ ಸ್ವಲ್ಪ ನೀರನ್ನೂ ಹಾಕಿ, ಬಾಣಲೆಗೆ ಹಾಕಿ, ನಂತರ ಉಪ್ಪು ಬೆರೆಸಿ,ಮಸಾಲೆಯನ್ನು ಕುದಿಯಲು ಬಿಡಿ.
- ಈಗ ಒಗ್ಗರಣೆ ತಯಾರು ಮಾಡುವ ಅದಕ್ಕಾಗಿ ಒಂದು ಚಿಕ್ಕ ಬಾಣಲೆಯನ್ನು ತೆಗೆದು ಕೊಳ್ಳಿ ಅದಕ್ಕೇ ಸ್ವಲ್ಪ ಎಣ್ಣೆಯನ್ನೂ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಿ, ಸಾಸಿವೆ ಪಟ ಪಟನೆ ಹುಡಿಯುವಾಗ ಕರಿ ಬೇವಿನ ಸೊಪ್ಪು ಹಾಕಿ, ಹಾಗೇಯೆ ಬೆಳ್ಳುಳ್ಳಿ ಯನ್ನು ಹಾಕಿ, ಹಾಗೇ ಚಿಕ್ಕದಾಗಿ ಹಚ್ಚಿದ ಶುಂಠಿ, ಕಾಯಿಮೆಣಸೂ ಅನ್ನೂ ಹಾಕಿ, ಈಗ ಬೆಳ್ಳುಳ್ಳಿ ಬಾಡುವವರೆಗೆ ಸೌಟ್ ನಿಂದಾ ಮಗುಚುತ್ತ ಇರಿ.
- ಈ ಬಾಣಲೆಯಲ್ಲಿ ಬೆಯುತಿರುವ ಮಸಾಲೆ ಕಡೆ ಗಮನ ಕೊಡುವ , ಮಸಾಲೆ ಕುದಿಯುತಿರುವಾಗ ಭೂತಾಯಿ ಮೀನು ನಿದಾನವಾಗಿ ಹಾಕಿ, ನಂತರ ಒಗ್ಗರಣೆ ಮಾಡಿ ಇಟ್ಟದನ್ನ ಹಾಕಿ. ಎರಡು ನಿಮಿಷ ಕುದಿಯಲು ಬಿಡಿ. ಈಗ ಭೂತಾಯಿ ಮೀನು ಸಾಂಬಾರು ಸವಿಯಲು ಸಿದ್ಧವಾಗಿದೆ.
- ಇದನ್ನೂ ಊಟದ ಜೊತೆಗೆ ಸವಿಯಲು ಬಲು ರುಚಿಯಾಗಿರತ್ತದೆ. ಇದರಲ್ಲಿ ನೂರು ಗ್ರಾಂ ಗೆ 92.6 ಕಿಲೋ ದಷ್ಟು ಕ್ಯಾಲರಿ ಇದೆ.