Veg kurma recipe in kannada ವೆಜಿಟೆಬಲ್ kurma

Veg kurma recipe in kannada : ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ವೆಜಿಟೆಬಲ್ kurma ರೆಸಿಪಿ ಕನ್ನಡ ದಲ್ಲೀ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ವೆಜಿಟೆಬಲ್ kurma

Veg kurma recipe in kannada ಮಾಡಲು ಬೇಕಾಗುವ ಸಾಮಗ್ರಿಗಳು

  • ಎರಡು ಬಟಾಟೆ Potatoes 248g
  • ಬಟಾಣಿ Green Peas 100g
  • Cauliflower 288g
  • ಎರಡು ಕ್ಯಾರಟ್ ಹದವಾದ 150g
  • ಹದಿನೈದರಿಂದ ಇಪತ್ತು ಬೀನ್ಸ್ ಚಿಕ್ಕದಾಗಿ ಹಚ್ಚಿದ 292g
  • ಮೂರರಿಂದ ನಾಲ್ಕು ಟೊಮೆಟೊ tomato 194g
  • ಹದವಾದ ಈರುಳ್ಳಿ ಹಚ್ಚಿದ Onion 158g
  • ಒಂದು ಕಟ್ಟು ಕೊತ್ತಂಬರಿ ಸೊಪ್ಪು Cilantro 143g
  • ನಾಲ್ಕೂ ಕಾಯಿ ಮೆಣಸು Green Chilies 22g
  • ಒಂದು ದೊಡ್ಡ ಚಮಚ ದಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್ Ginger Garlic Paste 24g
  • ಒಂದು ಚಿಕ್ಕ ಚಮಚ ದಷ್ಟು ಅರಶಿನ ಪುಡಿ Turmeric powder
  • ಒಂದುವರೆ ಚಿಕ್ಕ ಚಮಚ ದಷ್ಟು ಜೀರಿಗೆ Cumin seeds
  • ನಾಲ್ಕೂವರೆ ಚಿಕ್ಕ ಚಮಚ ದಷ್ಟು ಕೊತ್ತಂಬರಿ ಬೀಜ 10g
  • ಎಂಟರಿಂದ ಹತ್ತು ಏಲಕ್ಕಿ Green Cardamom 2g
  • ಒಂದೂ ಚಿಕ್ಕ ಚಮಚ ದಷ್ಟು ಕರಿ ಮೆಣಸು Black pepper corns 3g
  • ಹತ್ತರಿಂದ ಹನ್ನೆರಡು ಬ್ಯಾಡಗಿ ಕೆಂಪು ಮೆಣಸಿನಕಾಯಿ 17g
  • ಎರಡೂ ದೊಡ್ಡ ಚಮಚ ದಷ್ಟು ಗೇರು ಬೀಜ 24g
  • ಮೂರರಿಂದ ನಾಲ್ಕು ಚಮಚ ದಷ್ಟು ಬಾದಾಮಿ Almonds 36g
  • Copra ಒಂದು ತೆಂಗಿನಕಾಯಿ ತುರಿದ 67g
  • Amul fresh Cream ಒಂದೂ ಪ್ಯಾಕೆಟ್ 202g
  • ಒಂದು ಚಿಕ್ಕ ಚಮಚ ದಷ್ಟು ಬೆಲ್ಲ Jaggery 25g
  • ಉಪ್ಪು ರಚಿಗೆ ತಕ್ಕಷ್ಟು
  • 70ml Sunflower ಎಣ್ಣೆ 61g

Amazon Grocery Store Visit

ವೆಜಿಟೆಬಲ್ kurma recipe ಮಾಡುವ ವಿಧಾನ

  • ಮೊದಲು ಬಾದಾಮಿಯನ್ನು ಸ್ವಲ್ಪ ನೀರಲ್ಲಿ ಬೇಯಿಸಿ ನಂತರ ಅದನ್ನು ಸಪ್ಪೆ ನೀರಲ್ಲಿ ಹಾಕಿ.ಅದರ ಹೊರಗಿನ ಸಿಪ್ಪೆ ತೆಗೆದು ಒಂದು ಪಿಂಗಣಿ ಪಾತ್ರೆಯಲ್ಲಿ ಹಾಕಿ ಇಡಿ.
  • ನಂತರ ಮಸಾಲೆ ತಯಾರು ಮಾಡುವ ಅದಕ್ಕಾಗಿ ಒಂದು ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಆನ್ ಮಾಡಿ.ನಂತರ ಅದಕ್ಕೆ ಕರಿಮೆಣಸು, ಏಲಕ್ಕಿ,ಕೊತ್ತಂಬರಿ ಬೀಜ, ಜೀರಿಗೆ, ನಂತರ ಬ್ಯಾಡಗಿ ಮೆಣಸಿನಕಾಯಿ ಹಾಕಿ, ಚೆನ್ನಾಗಿ ಸೌಟ್ ನಿಂದಾ ಮಗುಚಿ. ಮಸಾಲೆ ಪರಿಮಳ ಬಂದಾಗ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಿ.
  • ನಂತರ ಒಂದು ಮಿಕ್ಸಿ ಬ್ಲಂಡರ್ ಜಾರ್ ತಗೊಳ್ಳಿ, ಅದಕ್ಕೇ ಬಿಸಿ ಆರಲು ಬಿಟ್ಟ ಮಸಾಲೆಯನ್ನು ಹಾಕಿ. ನಂತರ ಸ್ವಲ್ಪ ಕೂಡ ನೀರನ್ನೂ ಹಾಕದೆ ಚಿಕ್ಕದಾಗಿ ಪುಡಿ ಮಾಡಿ.
  • ಅದೇ ರೀತಿ ಮಸಾಲೆ ಕಾಯಿಸಿದ ಬಾಣಲೆಯಲ್ಲಿಯೇ ಸ್ವಲ್ಪ ಎಣ್ಣೆಯನ್ನೂ ತೆಗೆದುಕೊಳ್ಳಿ, ಬಾಣಲೆ ಬಿಸಿ ಆಗಲು ಸ್ಟವ್ ಮೇಲೆ ಇಡಿ. ನಂತರ ಚಿಕ್ಕದಾಗಿ ಹಚ್ಚಿದ ಈರುಳ್ಳಿಯನ್ನು ಹಾಕಿ ಹಾಗೇ ಪಿಂಗಣಿಯಲ್ಲಿ ಇರುವ ಬಾದಾಮಿ, ಗೇರುಬೀಜ, ನಂತರ ಈರುಳ್ಳಿ ಬೇಗ ಕಾಯಲು ಸ್ವಲ್ಪ ಉಪ್ಪನ್ನು ಬೆರೆಸಿ, ನಂತರ ಅರೆದಿರು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಯಿ ಮೆಣಸು, ಅರಶಿನ ಪುಡಿ, ನಂತರ ಈರುಳ್ಳಿ ಬಡುತ್ತ ಬರುವಾಗ, ಹಚ್ಚಿದ ಟೊಮ್ಯಾಟೋ ಹಾಕಿ. ನಂತರ ಟೊಮ್ಯಾಟೋ ಸ್ವಲ್ಪ ಮೆದು ಆಗುವಾಗ ತುರಿದ ತೆಂಗಿನಕಾಯಿ ಹಾಕಿ. ಕೊನೆಗೆ ಬೆಲ್ಲವನ್ನು ಸೇರಿಸಿ, ಮಿಕ್ಸ್ ಮಾಡಿ. ನಂತರ ಸ್ಟೌವ್ ಆಫ್ ಮಾಡಿ ಬಿಸಿ ಆರಲು ಬಿಡಿ.
  • ನಂತರ ಪುಡಿ ಮಾಡಿ ಇಟ್ಟ ಮಿಕ್ಸಿ ಬ್ಲಂಡರ್ ಜಾರ್ ಗೆ ಈಗ ತಯಾರಿಸಿದ ಮಿಶ್ರಣವನ್ನು ಹಾಕಿ. ನಂತರ ಸ್ವಲ್ಪ ನೀರು ಬೆರೆಸಿ, ಸನ್ನವಾಗೀ ರುಬ್ಬಿಕೊಳ್ಳಿ.
  • ನಂತರ ಒಂದು ಬೋಗೊನಿಯನ್ನು ತೆಗೆದುಕೊಳ್ಳಿ, ಅದಕ್ಕೆ ಸ್ವಲ್ಪ ನೀರು ಹಾಕಿ, ಅದೇ ರೀತಿ ಬಟಾಣಿ, ನಿಮಗೆ ಬೇಕಾದ ಹಾಗೆ ಉಪ್ಪನ್ನು ಬೆರೆಸಿ ಸ್ಟೌವ್ ಆನ್ ಮಾಡಿ.ಕುದಿಯಲು ಬಿಡಿ, ಕುದಿಯುತಿರುವಗ ಬಟಾಟೆ ಯನ್ನೂ ಹಾಕಿ. ಹಾಗೇಯೆ ಕ್ಯಾರಟ್,Cauliflower, ನಂತರ ಬೀನ್ಸ್ ಕೊನೆಗೆ ಈ ತರಕಾರಿಯ ಮಿಶ್ರಣವನ್ನು ಶೇಕಡಾ 75%ಎಸ್ಟು ಬೇಯಿಸಿ. ನಂತರ ಬೇಯಿಸಿದ ತರಕಾರಿಯ ನ್ನ ಒಂದು ದೊಡ್ಡ ತಟ್ಟೆಯಲ್ಲಿ ಹಾಕಿ ಇಡಿ.ಅದರ ನೀರನ್ನು ಹಾಗೇ ತೆಗೆದು ಇಡಿ.
  • ನಂತರ ಒಂದು ಬೋಗೋನಿಯಲ್ಲಿ ಮಸಾಲೆಯನ್ನು ತೆಗೆದುಕೊಳ್ಳಿ, ನಂತರ ಅದರ ಮಸಾಲೆ ವೇಸ್ಟು ಆಗದ ಹಾಗೆ ಸ್ವಲ್ಪ ನೀರನ್ನು ಬೆರೆಸಿ ಹಾಕಿ. ಸ್ಟೌವ್ ಆನ್ ಮಾಡಿ. ಮಸಾಲೆ ಕುದಿಯಲು ಬಿಡಿ. ಮಸಾಲೆ ಕುದಿಯುತ್ತಾ ಬರುವಾಗ ಬೇಯಿಸಿದ ತರಕಾರಿಯನ್ನು ಹಾಕಿ. ನಂತರ ರುಚಿ ನೋಡಿ ಉಪ್ಪನ್ನು ಸೇರಿಸಿ. ಹಾಗೇ ಮುಚ್ಚಳ ಹಾಕಿ ಸಂಪೂರ್ಣವಾಗಿ ಬೇಯಿಸಿ, ನಂತರ ಫ್ರೆಶ್ ಕ್ರೀಮ್ ಅನ್ನು ಹಾಕಿ ಮಿಕ್ಸ್ ಮಾಡಿ,ನಂತರ ಕತ್ತರಿಸಿ ಇಟ್ಟ ಫ್ರೆಶ್ ಕೊತ್ತಂಬರಿ ಸೊಪ್ಪು ಬೆರೆಸಿ. ಕೊನೆಗೆ ತರಕಾರಿ ಬೆಂದ ನಂತರ ಸ್ಟೌವ್ ಆಫ್ ಮಾಡಿ.
  • ಈಗ ತರಕಾರಿ kurma ರೆಡಿಯಾಗಿದೆ. ಇದನ್ನೂ ಪರೋಟ ಜೊತೆಗೆ ಸವಿದರೆ ಬಹಳ ಚೆನ್ನಾಗಿರುತ್ತದೆ.ಇದರಲ್ಲಿ ನೂರು ಗ್ರಾಂ ಗೆ ಕೇವಲ ನೂರರಷ್ಟು ಕ್ಯಾಲರಿ ಇದೆ.

Dosa recipe in kannada ದೋಸೆ ಮಾಡುವ ವಿಧಾನ ರೆಸಿಪಿ ಕನ್ನಡ

Leave a Comment

x
error: Content is protected !!