Wheat flour sweet recipes in kannada: ಈ ಒಂದು ಆರ್ಟಿಕಲ್ ನಲ್ಲಿ ನಾವು ಇಂದು ಬೆಲ್ಲದ ಬರ್ಫಿ ಮಾಡುವುದೂ ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

Wheat flour sweet recipes in kannada ಮಾಡಲು ಬೇಕಾಗುವ ಸಾಮಗ್ರಿಗಳು
- ತುಪ್ಪ ಕಾಲು ಕಪ್ ಅಷ್ಟು Ghee
- ಒಂದು ಕಪ್ ಗೋಧಿ ಹಿಟ್ಟು Wheat flour
- ಕಾಲು ಚಿಕ್ಕ ಚಮಚ ದಷ್ಟು ಕೊತ್ತಂಬರಿ ಪೌಡರ್ Coriander powder
- ಅರ್ದ ಕಪ್ ಅಷ್ಟು ಬೆಲ್ಲ Jaggary
ಬೆಲ್ಲದ ಬರ್ಫಿ ಮಾಡುವ ವಿಧಾನ ತಿಳಿಯೋಣ

- ಒಂದು ಬಾಣಲೆಗೆ ಕಾಲು ಕಪ್ ಅಷ್ಟು ತುಪ್ಪವನ್ನು ಸುರಿಯಿರಿ. ನಂತರ ತುಪ್ಪವನ್ನು ಕರಗಲು ಬಿಡಿ. ತುಪ್ಪ ಕರಗಿದ ನಂತರ ಒಂದು ಕಪ್ ಅಷ್ಟು ಗೋಧಿ ಹಿಟ್ಟು ಸೇರಿಸಿ, ಕಡಿಮೆ ಬೆಂಕಿಯಲ್ಲಿ ಸುಮಾರು ಇಪ್ಪತ್ತು ರಿಂದ ಮೂವತ್ತು ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ. ಇಲ್ಲಿ ತುಪ್ಪ ಕಡಿಮೆ ಎನಿಸಿದರೆ ಸ್ವಲ್ಪ ಸೇರಿಸಿ, ತೆಳುವಾದ ಹಿಟ್ಟಿನ ತರ ಭರ್ಪಿಯ ಹಿಟ್ಟು ತಯಾರು ಮಾಡಿ. ನಂತರ ಸ್ಟೌವ್ ಆಫ್ ಮಾಡಿ ಏಕೆಂದರೆ ಸ್ಟೌವ್ ಆನ್ ಮಾಡಿ ಇದ್ದರೆ, ಭರ್ಪಿ ಹಿಟ್ಟು ಕಪ್ಪು ಬಣ್ಣಕ್ಕೆ ತಿರುಗುವ ಸಾದ್ಯತೆ ಹೆಚ್ಚು ಇರುತ್ತದೆ. ನಂತರ ಅದಕ್ಕೆ ಕಾಲು ಚಿಕ್ಕ ಚಮಚ ದಷ್ಟು ಕೊತ್ತಂಬರಿ ಪೌಡರ್ ಅನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ, ಅದೇ ರೀತಿ ಅರ್ದ ಕಪ್ ಅಷ್ಟು ಹುಡಿ ಮಾಡಿದ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ದಪ್ಪ ಹಿಟ್ಟು ಮಾಡಿ.
- ನಂತರ ಮಿಕ್ಸ್ ಮಾಡಿ ಇಟ್ಟ ಬರ್ಫಿ ಅನ್ನು ಒಂದು ತಟ್ಟೆಗೆ ಹಾಕಿ. ಸೌಟ್ ನಿಂದಾ ಒತ್ತಿ ಜೊತೆಗೂಡಿಸಿ. ನಂತರ ಬರ್ಪಿ ಅನ್ನೂ ಯಾವ ಶೇಪ್ ಬೇಕು ಹಾಗೆ ಕಟ್ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ.ಕೊನೆಗೆ ಅದನ್ನು ತಂಪು ಆಗಲು ಫ್ರೀಜ್ ಅಲ್ಲಿ ಇಡಿ.ಸುಮಾರು ಹದಿನೈದು ನಿಮಿಷಗಳ ನಂತರ ನೀವೂ ಕಟ್ಟ್ ಮಾಡಿದ ಬರ್ಫಿ ಯನ್ನೂ ತೆಗೆದು ಸವಿಯಿರಿ.
Traditional chakli recipe ಅಕ್ಕಿ ಹಿಟ್ಟಿನಿಂದ ಚಕ್ಕುಲಿ
Beans palya in kannada ಬೀನ್ಸ್ ಪಲ್ಯ ಮಾಡುವ ವಿಧಾನ
Simple chocolate cake recipe in kannada ಚಾಕಲೇಟ್ ರೆಸಿಪಿ